Home » ಕೋಟ ಹಾಲು ಉತ್ಪಾದಕರ ಸಹಕಾರ ಸಂಘ
 

ಕೋಟ ಹಾಲು ಉತ್ಪಾದಕರ ಸಹಕಾರ ಸಂಘ

ವಾರ್ಷಿಕ ಸಭೆ

by Kundapur Xpress
Spread the love

ಕೋಟ: ಜಿಲ್ಲೆಯಲ್ಲಿ ಐಟಿ ಬಿಟಿ ಕಂಪನಿಗಳು ಕಾಲಿರಿಸಿದರೆ ಹೈನುಗಾರಿಕೆ ತನ್ನಿಂತ್ತಾನೆ ಅಭಿವೃದ್ಧಿಗೊಳ್ಳುತ್ತದೆ ಎಂದು ಕೆ.ಎಂ.ಎಫ್ ವಿಸ್ತರ್ಣಾಧಿಕಾರಿ ಸರಸ್ಚತಿ ಹೇಳಿದರು.ಕೋಟ ಮಣೂರು ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ಕೋಟದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕಸಭೆಯಲ್ಲಿ ಹೈನುಗಾರಿಗೆ ಮಾಹಿತಿ ನೀಡಿ ಪ್ರಸ್ತುತ ಹೈನುಗಾರಿಕೆ ಕುಂಠಿತಗೊಳ್ಳುತ್ತಿದೆ ಇದಕ್ಕೆ ಕಾರಣ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವ ಹಿರಿಯರಿಗೆ ಹೊರ ಉದ್ಯೋಗದಲ್ಲಿರುವ ಅವರ ಮಕ್ಕಳು ಮನೆಯವರನ್ನು ಹೈನುಗಾರಿಕೆ ತೊಡಗಿಕೊಳ್ಳದಂತೆ ತಡೆವೊಡ್ಡುವ ಪ್ರಸಂಗಗಳು ಎದುರಾಗಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಜಿಲ್ಲೆಯಲ್ಲಿ ಐಟಿಬಿಟಿ ಕಂಪನಿಗಳು ನೆಲೆಯಾದರೆ ಅದರಲ್ಲಿ ಹೈನುಗಾರರ ಮಕ್ಕಳು ಕಾರ್ಯನಿರ್ವಹಿಸಿದರೆ ಮನೆಯವರು ಸ್ವಾವಲಂಬಿ ಬದುಕನ್ನು ಹೈನುಗಾರಿಕೆ ಮೂಲಕ ಕಂಡುಕೊಳ್ಳುತ್ತಾರೆ ಎಂದರಲ್ಲದೆ ಹೈನುಗಾರಿಕೆ ಬೇಕಾಗುವ ಸವಲತ್ತು ,ಅನುಸರಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಸಂಚಾರಿ ವೈದ್ಯಕೀಯ ಸೇವೆ ಪಡೆದುಕೊಳ್ಳಲು ಸರಕಾರ 1962 ಕರೆ ಮಾಡಲು ಸಲಹೆ ನೀಡಿದರು.ಇದೇ ವೇಳೆ ಅತಿ ಹೆಚ್ಚು ಹಾಲು ಸಂಘಕ್ಕೆ ನೀಡಿದ ಉತ್ಪಾದಕರನ್ನು ಬಹುಮಾನ ನೀಡಿ ಗೌರವಿಸಲಾಯಿತು.ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಕಾಂತ್ ,ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಕೃಷ್ಣ ದೇವಾಡಿಗ ವರದಿ ಮಂಡಿಸಿದರು.ಇತ್ತೀಚಿಗೆ ನಿಧರಾದ ಸಂಘದ ಸದಸ್ಯರಾದ ಸದಾಶಿವ ಹೊಳ್ಳ,ರಾಮಕೃಷ್ಣ ಆಚಾರ್ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.ಸಿಇಓ ರಾಜೇಶ್ ನಡಾವಳಿ ಬಗ್ಗೆ ವಿವರಿಸಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಭೆಯನ್ನು ನಿರ್ವಹಿಸಿದರು.ಕೋಟ ಮಣೂರು ಮಹಾಲಿಂಗೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ಕೋಟದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕಸಭೆಯಲ್ಲಿ ಅತಿ ಹೆಚ್ಚು ಹಾಲು ಸಂಘಕ್ಕೆ ನೀಡಿದ ಉತ್ಪಾದಕರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ,ಸಂಘದ ಉಪಾಧ್ಯಕ್ಷ ಶ್ರೀಕಾಂತ್ ,ನಿರ್ದೇಶಕರುಗಳು ಉಪಸ್ಥಿತರಿದ್ದರು.

   

Related Articles

error: Content is protected !!