ಕುಂದಾಪುರ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಗ್ರೂಪ್ ಡಿ ದರ್ಜೆಯಲ್ಲಿ ಸೇವೆ ಗೈಯುತ್ತಿರುವ ಶ್ರೀಮತಿ ಸಾಕು ಮತ್ತು ಸ್ವಚ್ಚತಾ ಸಿಬ್ಬಂದಿ ಶ್ರೀಮತಿ ಸಾಕು ಇವರಿಬ್ಬರನ್ನು ಶ್ರೀ ಅನ್ನ ಪೂರ್ಣೇಶ್ವರಿ ಸೇವಾ ಬಂಧು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ. ವೀಣಾ ಪಿ.ಎಸ್,
ಡಾ. ವಿಜಯಲಕ್ಷ್ಮಿ, ಶ್ರೀಮತಿ ಲೆನೋರಾ (ಎ.ಎ.ಓ), ಶ್ರೀಮತಿ ಶಾಲಿ (ಅಧೀಕ್ಷಕರು), ಅನ್ನಪೂರ್ಣ (ಶುಶ್ರೂಷಾಧೀಕ್ಷಕರು), ಮತ್ತು ಈ ಸಂಸ್ಥೆಯ ಓರ್ವರಾದ ಸಾಯಿನಾಥ್ ಶೇಟ್, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು