ದುಬೈ : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ಹುದ್ದೆಗೇರಲಿರುವ ಅತಿ ಕಿರಿಯ ವ್ಯಕ್ತಿ ಎನ್ನುವ ಹಿರಿಮೆಗೆ ಪಾತ್ರರಾಗಲಿದ್ದಾರೆ.
35 ವರ್ಷದ ಶಾ, ಡಿ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದು ಆ ವೇಳೆಗೆ ಅವರಿಗೆ 36 ವರ್ಷ ವಯಸ್ಸಾಗಿರಲಿದೆ. 2019ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿರುವ ಶಾ, 62 ವರ್ಷದ ನ್ಯೂಜಿಲೆಂಡ್ನ ಗ್ರೆಗ್ ಬಾರ್ಕ್ ಅವರಿಂದ ತೆರವಾಗಲಿರುವ ಸ್ಥಾನವನ್ನು ತುಂಬಲಿದ್ದಾರೆ.
ಐಸಿಸಿ ಅಧ್ಯಕ್ಷ ಹುದ್ದೆಯ ಕಾರ್ಯಾವಧಿ 2 ವರ್ಷ ಕಾಲ ಇರಲಿದ್ದು, ಒಬ್ಬ ವ್ಯಕ್ತಿ ಸತತ 3 ಅವಧಿಗಳಿಗೆ ಅಂದರೆ 6 ವರ್ಷ ಅಧಿಕಾರದಲ್ಲಿ ಇರಬಹುದು. ಆದರೆ ಬಾರ್ಕ್ ಸತತ 3ನೇ ಬಾರಿಗೆಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ ಕಾರಣ, ಹೊಸ ಅಧ್ಯಕ್ಷರ ಆಯ್ಕೆ ನಡೆಸಬೇಕಾಯಿತು. ಸ್ಪರ್ಧೆಯಲ್ಲಿ ಶಾ ಒಬ್ಬರೇ ಇದ್ದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.