ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸದಸ್ಯತ್ವ ನವೀಕರಿಸುವ ಮೂಲಕ ಸೆ.2 ರಿಂದ ಬಿಜೆಪಿ ತನ್ನ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಿದೆ. ಈ ಕುರಿತು ಸದಸ್ಯತ್ವ ಅಭಿಯಾನ ಮುಖ್ಯಸ್ಥ ವಿನೋದ್ ತಾವ್ಡೆ ಮಾತನಾಡಿ, ಮೊದಲ ಹಂತದ ಸದಸ್ಯತ್ವ ಅಭಿಯಾನವು ಸೆ.2 ರಿಂದ ಸೆ.25ರವರೆಗೆ ನಡೆಯಲಿದೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮೋದಿ ಅವರ ಸದಸ್ಯತ್ವವನ್ನು ಮೊದಲು ನವೀಕರಿಸಲಿದ್ದಾರೆ.ಕೇಂದ್ರ ಸಚಿವರು,ಮುಖ್ಯಮಂತ್ರಿಗಳು, ಸಂಸದರಿಗೆ ಅಭಿಯಾನದ ನೇತೃತ್ವ ವಹಿಸಲಾಗುವುದು. ಅವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಅಕ್ಟೋಬರ್ 1ರಿಂದ ಅ. 15ರ ವರೆಗೆ 2ನೇ ಹಂತ ನಡೆಯಲಿದೆ ಎಂದರು.