Home » 58ನೇ ಸ್ನೇಹ ಬಳಗ : ಶಾಸಕ ಕಿರಣ್ ಕೊಡ್ಗಿ ಭಾಗಿ
 

58ನೇ ಸ್ನೇಹ ಬಳಗ : ಶಾಸಕ ಕಿರಣ್ ಕೊಡ್ಗಿ ಭಾಗಿ

by Kundapur Xpress
Spread the love

ಕುಂದಾಪುರ : 58ನೇ ಸ್ನೇಹ ಬಳಗ ಘಟಕ ಗೋಳಿಯಂಗಡಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಸಿಯೇಷನ್ ಇವರ ನೇತೃತ್ವದಲ್ಲಿ ಆಯೋಜಿಸಲಾದ ವಾಹನ ಚಾಲಕ ಮತ್ತು ಮಾಲಕರ ಸಂಘದ ವಾರ್ಷಿಕ ಮಹಾಸಭೆಯ ಉದ್ಘಾಟನೆಯನ್ನು ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿಯವರು. ಕಾರ್ಯಕ್ರಮವನ್ನ ಉದ್ಘಾಟಿಸಿ ಶುಭ ಹಾರೈಸಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ವಾಹನ ಚಾಲಕ ಮಾಲಕರ ಕುಂದು ಕೊರತೆ ವಿಚಾರಗಳ ಬಗ್ಗೆ ಮುಂದಿನ ದಿನದಲ್ಲಿ ಸರಕಾರದ ಗಮನಕ್ಕೆ ತಂದು ಇವರ ಬೇಡಿಕೆ ಈಡೇರಿಸುವ ಬಗ್ಗೆ ಭರವಸೆಯ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ್ ಮಡಿವಾಳ ತೊಂಬತ್ತು, ಅಧ್ಯಕ್ಷರು ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ 58ನೇ ಸ್ನೇಹ ಬಳಗ ಸಂಘ ಗೋಳಿಯಂಗಡಿ ವಹಿಸಿದರು.ಕಾರ್ಯಕ್ರಮದ ವೇದಿಕೆಯಲ್ಲಿ ರಘುಪತಿ ಭಟ್ ಮಾಜಿ ಶಾಸಕರು ಉಡುಪಿ,ರಮೇಶ್ ಕೆ ಕೋಟ್ಯಾನ್ ಕಟಪಾಡಿ, ಪ್ರಧಾನ ಕಾರ್ಯದರ್ಶಿ ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಉಡುಪಿ,ರಮೇಶ್ ಕುಂದಾಪುರ ಅಧ್ಯಕ್ಷರು ಕರ್ನಾಟಕ ರಾಜ್ಯ ಟ್ಯಾಕ್ಸಿ ಆರ್ಗನೈಜೇಷನ್,ದಿನೇಶ್ ಕಿಣಿ ಉಪಾಧ್ಯಕ್ಷರು ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್,ಗಣೇಶ್ ಕಿಣಿ ಗಣೇಶ್ ಕ್ಯಾಶ್ಯೂ ಬೆಳ್ವೆ ರಾಧಾ ಗ್ರಾಮ ಪಂಚಾಯತಿನ ಅಧ್ಯಕ್ಷೆ ಬೆಳ್ವೆ, ಚಂದ್ರಶೇಖರ್ ಶೆಟ್ಟಿ ಸೂರ್ಗೊಳ್ಳಿ,, ಮಾಜಿ ಅಧ್ಯಕ್ಷ,,ವಿಜಯ್ ಕುಮಾರ್ ಶೆಟ್ಟಿ ಉದ್ಯಮಿ ಗೋಳಿಯಂಗಡಿ, ಸುಬ್ರಾಯ ನಾಯಕ್ ಗೋಳಿಯಂಗಡಿ, ಹಾಗೂ 58ನೇ ಸ್ನೇಹ ಬಳಗ ಘಟಕ ಗೋಳಿಯಂಗಡಿ ಇದರ ಸದಸ್ಯರು, ಗ್ರಾಮ ಪಂಚಾಯಿತಿನ ಸದಸ್ಯರು ಉಪಸ್ಥಿತರಿದ್ದರು.

   

Related Articles

error: Content is protected !!