Home » ಬಿಜೆಪಿ ಸದಸ್ಯತಾ ಅಭಿಯಾನ ಯಶಸ್ಸಿಗೆ ಕಿಶೋರ್‌ ಕುಮಾರ್‌ ಕರೆ
 

ಬಿಜೆಪಿ ಸದಸ್ಯತಾ ಅಭಿಯಾನ ಯಶಸ್ಸಿಗೆ ಕಿಶೋರ್‌ ಕುಮಾರ್‌ ಕರೆ

by Kundapur Xpress
Spread the love

ಉಡುಪಿ : ಸೆ.2ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಜೆಪಿ ಸದಸ್ಯತಾವನ್ನು ಪಡೆಯುವ ಮೂಲಕ ರಾಷ್ಟ್ರಾದ್ಯಂತ ‘ಬಿಜೆಪಿ ಸದಸ್ಯತಾ ಅಭಿಯಾನ-2024’ಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಸಮಸ್ತ ಕಾರ್ಯಕರ್ತರು ಮತ್ತು ಪಕ್ಷದ ಹಿತೈಷಿಗಳು 8800002024  ಕ್ಕೆ ಮಿಸ್ಡ್ ಕಾಲ್ ನೀಡಿ ಬಿಜೆಪಿ ಸದಸ್ಯತನ ಪಡೆಯುವ ಮೂಲಕ ಜಿಲ್ಲೆಯಾದ್ಯಂತ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ನಡೆದ ‘ಬಿಜೆಪಿ ಸದಸ್ಯತ್ವ ಅಭಿಯಾನ 2024’ರ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಸೆ.2ರಿಂದ ಸೆ.25 ಮತ್ತು ಅ.1ರಿಂದ ಅ.15ರ ವರೆಗೆ 2 ಹಂತಗಳಲ್ಲಿ ನಡೆಯುವ ‘ಬಿಜೆಪಿ ಸದಸ್ಯತಾ ಅಭಿಯಾನ’ದಲ್ಲಿ ಮಿಸ್ಡ್ ಕಾಲ್, ಕ್ಯೂ.ಆರ್. ಕೋಡ್ ಸ್ಕ್ಯಾನ್ ಮತ್ತು ನಮೋ ಆಪ್ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತನ ನೊಂದಾವಣೆ ಮಾಡುವ ಜೊತೆಗೆ ಅ.16ರಿಂದ ಅ.30ರ ವರೆಗೆ ನಡೆಯುವ ಸಕ್ರಿಯ ಸದಸ್ಯತಾ ಅಭಿಯಾನದಲ್ಲಿ ಕೂಡಾ ಅತ್ಯಂತ ಹುಮ್ಮಸ್ಸಿನಿಂದ ಪಾಲ್ಗೊಳ್ಳಬೇಕು ಎಂದರು.ಆ.30 ಮತ್ತು 31ರಂದು ಮಂಡಲ ಮಟ್ಟದಲ್ಲಿ ಸದಸ್ಯತಾ ಅಭಿಯಾನದ ಮಾಹಿತಿ ಕಾರ್ಯಾಗಾರಗಳು ನಡೆಯಲಿವೆ. ಪ್ರತೀ ಬೂತ್ ಗಳಲ್ಲಿ ಕನಿಷ್ಠ 300 ಮೇಲ್ಪಟ್ಟು ಸದಸ್ಯರನ್ನು ನೊಂದಾಯಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ನೊಂದಾವಣೆ ಆಗುವಂತೆ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಳ್ಳಬೇಕು ಎಂದರು

ಬಿಜೆಪಿ ಸದಸ್ಯತಾ ಅಭಿಯಾನ 2024’ರ ಸದಸ್ಯತ್ವ ಪ್ರಕ್ರಿಯೆಯ ಮಾಹಿತಿ ಪತ್ರಕವನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಬಿಡುಗಡೆಗೊಳಿಸಿದರು.ವೈಚಾರಿಕತೆ, ಕಾರ್ಯಪದ್ಧತಿ ಬಿಜೆಪಿಯನ್ನು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವನ್ನಾಗಿಸಿದೆ : ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸದಸ್ಯತಾ ಅಭಿಯಾನ 2024ರ ರಾಜ್ಯ ಸಮಿತಿ ಸದಸ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಪಕ್ಷದ ವಿಶಿಷ್ಟ ಕಾರ್ಯಪದ್ಧತಿ, ವೈಚಾರಿಕತೆ ಹಾಗೂ ರಾಷ್ಟ್ರ ನಿರ್ಮಾಣ ಮತ್ತು ಜನ ಕಲ್ಯಾಣದ ಬದ್ಧತೆಯಿಂದ ಬಿಜೆಪಿ ಇಂದು ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವೆನಿಸಿದೆ. ಪಕ್ಷದ ಸದಸ್ಯತನ ಹೆಚ್ಚಳದ ಜೊತೆಗೆ ಸಂಘಟನೆ ಸದೃಢವಾದಾಗ ಗೆಲುವು ನಿಶ್ಚಿತ ಎಂಬುದಕ್ಕೆ ಪಕ್ಷ ಬೆಳೆದು ಬಂದ ರೀತಿಯೇ ಸಾಕ್ಷಿ ಎಂದರು.

ಸಂಘಟನಾತ್ಮಕವಾಗಿ ಕರಾವಳಿ ಕರ್ನಾಟಕದ ಭದ್ರ ಕೋಟೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಇದ್ದಾರೆ. ರಾಜ್ಯದಲ್ಲೇ ಎಲ್ಲೂ ಇಲ್ಲದ ಸಕಾರಾತ್ಮಕ ವಾತಾವರಣ ಉಡುಪಿ ಜಿಲ್ಲೆಯಲ್ಲಿದೆ. ಇದರ ಸದುಪಯೋಗವನ್ನು ಪಡೆಯುವ ಮೂಲಕ ಪಕ್ಷದ ಜವಾಬ್ದಾರಿಯುತ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸಂಘಟಿತ ಪ್ರಯತ್ನದ ಮೂಲಕ ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸದಸ್ಯರನ್ನು ನೊಂದಾಯಿಸುವ ಪಣತೊಟ್ಟು ನಿಗದಿತ ಗುರಿಯನ್ನು ತಲುಪಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ದೆ ಮಾತನಾಡಿ ಸಂಘಟನಾತ್ಮಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಈ ಹಿಂದೆಯೂ ಗರಿಷ್ಠ ಸದಸ್ಯತನ ನೊಂದಾವಣೆ ಮಾಡಲಾಗಿದೆ. ಅಭಿಯಾನವನ್ನು ಸವಾಲಾಗಿ ಸ್ವೀಕರಿಸಿ ದಾಖಲೆ ಮಟ್ಟದಲ್ಲಿ ಸದಸ್ಯತನವನ್ನು ನೊಂದಾಯಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದರು.ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ ಮುಂದಿನ ಒಂದೂವರೆ ತಿಂಗಳ ನಿಗದಿತ ಅವಧಿಯಲ್ಲಿ ಎಲ್ಲರೂ ಬದ್ಧತೆಯಿಂದ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಸದಸ್ಯತಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.ಉಡುಪಿ ನಗರಸಭೆಗೆ ನೂತನವಾಗಿ ಆಯ್ಕೆಗೊಂಡಿರುವ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮತ್ತು ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಿ, ಬಿಜೆಪಿ ಪ್ರಕೋಷ್ಟಗಳ ಜಿಲ್ಲಾ ಸಂಚಾಲಕರು ಮತ್ತು ಸಹ ಸಂಚಾಲಕರುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಟ ಮತ್ತು ಮಂಡಲಗಳ ಪದಾಧಿಕಾರಿಗಳ ಸಹಿತ ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖರು, ಮಂಡಲಗಳ ಸಂಯೋಜಕರು ಹಾಗೂ ಮಾಹಿತಿ ಕಾರ್ಯಾಗಾರದ ಅಪೇಕ್ಷಿತರು ಉಪಸ್ಥಿತರಿದ್ದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸದಸ್ಯತಾ ಅಭಿಯಾನದ ಜಿಲ್ಲಾ ಪ್ರಮುಖ್ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

   

Related Articles

error: Content is protected !!