ಕುಂದಾಪುರ : ವಿಶ್ವ ಹೃದಯ ದಿನ ಪ್ರತಿ ವರ್ಷದ ಸೆಪ್ಟೆಂಬರ್ ಕೊನೆಯ ಭಾನುವಾರ ಅಂದರೆ ಈ ವರ್ಷ 2024 ಸೆಪ್ಟೆಂಬರ್ 29ನೇ ಭಾನುವಾರದಂದು ಆಚರಿಸಲ್ಪಡುತ್ತಿದ್ದು ‘ಕ್ರಿಯೆಗಾಗಿ ಹೃದಯವನ್ನು ಬಳಸಿ’ ಎಂಬ ಧ್ಯೇಯದ್ದೊಂದಿಗೆ ಕುಂದಾಪುರ ರೂರಲ್ ಆರ್ಯುವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಕೋಟೇಶ್ವರ, ಕುಂದಾಪುರ ಸೈಕಲ್ ಕ್ಲಬ್ – ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಎಂ.ಬಿ.ಫ್ರೆಂಡ್ಸ್ ಕುಂಭಾಶಿ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ತೆಕ್ಕಟ್ಟೆ ಘಟಕ ಇವರೆಲ್ಲರ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 29ರಂದು ಆದಿತ್ಯವಾರ ಬೆಳಿಗ್ಗೆ 7 ಘಂಟೆಗೆ ಸರಿಯಾಗಿ ಕುಂದಾಪುರದಿಂದ ಕುಂಭಾಶಿಯವರೆಗೆ 10 ಕಿ.ಮಿ “ಯೋಧಾ ಸೈಕ್ಲೋಥಾನ್ 2024” ಎಂಬ ಸೈಕಲ್ ಜಾಥಾ ನಡೆಯಲಿದೆ ಎಂದು ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಜಿ.ಪ್ರಸನ್ನ ಐತಾಳ್ ತಿಳಿಸಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಆನ್ ಲೈನ್ ಮೂಲಕ ಸೈಕಲ್ ಜಾಥಾದಲ್ಲಿ ಭಾಗವಹಿಸುವವರ ನೋಂದಾವಣೆ ಆರಂಭಗೊಂಡಿದ್ದು ಇದು ಸೆಪ್ಟೆಂಬರ್ 15ರಂದು ಮುಕ್ತಾಯಗೊಳ್ಳಲಿದೆ. ಆಸಕ್ತರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮೊದಲ 150 ಸೈಕಲ್ ಪಟುಗಳಿಗೆ ಉಚಿತವಾಗಿ ಟೀಶರ್ಟನ್ನು ಕೊಡಲಿದ್ದು ಇದಕ್ಕೆ ಗೀತಾನಂದ ಫೌಂಡೆಶನ್ ಕೋಟ ಪ್ರಾಯೋಜಕತ್ವವನ್ನು ನೀಡಿದ್ದಾರೆ. ಸೈಕಲ್ ಪಟುಗಳು ಕಡ್ಡಾಯವಾಗಿ ಶಿರಸ್ತ್ರಾಣದ ಬಳಕೆಯನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಚಾಲನೆ ಪಡೆಯಲಿರುವ ಈ ಸೈಕಲ್ ಜಾಥಾ ಕುಂಭಾಶಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಬಳಿ ಸಾಗಿ, ಅಲ್ಲಿ ಸಿದ್ಧಿವಿನಾಯಕ ಸಭಾಂಗಣದಲ್ಲಿ ಉಪಹಾರದ ಪೂರೈಸಿ ಮರಳಿ ಕುಂದಾಪುರಕ್ಕೆ ಬರಲಿದೆ. 10 ರಿಂದ 20 ವರ್ಷದ ವಯೋಮಿತಿಯ ಮತ್ತು 20ಕ್ಕೂ ಮೇಲ್ಪಟ್ಟವರಿಗೆ ಎರಡು ವಿಭಾಗದಲ್ಲಿ ಸೈಕಲ್ ಜಾಥಾ ನಡೆಯಲಿದ್ದು, ಲಕ್ಕಿ ಡ್ರಾದ ಮೂಲಕ ತಲಾ 4 ಸೈಕಲನ್ನು ಬಹುಮಾನವಾಗಿ ನೀಡಲಾಗುತ್ತದೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಖ್ಯಾತ ಹೃದಯ ತಜ್ಞರಿಗೆ ಅಭಿನಂದನೆ ಹಾಗೂ ಮನೋರಂಜನೆ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಸೈಕಲ್ ಜಾಥಾ ಸರ್ವೀಸ್ ರಸ್ತೆಯಲ್ಲಿಯೇ ಸಾಗಲಿದೆ. ಜಾಥಾದ ಜೊತೆಯಲ್ಲಿ ನಮ್ಮ ಸ್ವಯಂಸೇವಕರು, ಅಂಬ್ಯುಲೆನ್ಸ್ ಇರುತ್ತದೆ. ಸುರಕ್ಷತೆಗೆ ಒತ್ತು ನೀಡಲಾಗಿದೆ. ಕೆಲವೊಂದು ಕಡೆ ಹೆದ್ದಾರಿಯನ್ನು ಬಳಸಬೇಕಾದ ಅನಿವಾರ್ಯತೆ ಇರುವಲ್ಲಿ ಝೀರೋ ಟ್ರಾಫಿಕ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಲಾಗುವುದು. ಇದು ಸ್ಪರ್ಧೆಯಲ್ಲ, ಅರಿವು ಮೂಡಿಸುವ ಕಾರ್ಯಕ್ರಮ ಎಂದರು.
ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಜಾಗ್ರತಿ ಮೂಡಿಸುವ ಸಲುವಾಗಿ ನಡೆಯುವ ಈ ಸೈಕಲ್ ಜಾಥಾದಲ್ಲಿ ಎಲ್ಲಾ ಸಮಸ್ತ ನಾಗರಿಕರು, ಸಹೃದಯಿ ಮಕ್ಕಳು ಮತ್ತು ಬಂಧು-ಬಾಂಧವರು ತಮ್ಮನ್ನು ತೊಡಗಿಸಿಕೊಳ್ಳಬೇಕು. ನೊಂದಾವಣಿ ಹಾಗೂ ಮಾಹಿತಿಗೆ ದೂರವಾಣಿ ಸಂಖ್ಯೆ 9481019016, 7204033644, 8197029835 ಲಿಂಕ್-ಸಂಪರ್ಕಿಸಬಹುದು ಎಂದರು.
ಸುದ್ಧಿಗೋಷ್ಠಿಯಲ್ಲಿ ಕುಂದಾಪುರ ಸೈಕಲ್ ಅಸೋಸಿಯೇಶನ್ ನ ಪ್ರವೀಣ್, ಅರ್ಜುನ್ ದಾಸ್, ಸಚಿನ್ ನಕ್ಕತ್ತಾಯ, ಗೌತಮ್ ನಾವಡ ಉಪಸ್ಥಿತರಿದ್ದರು