ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ 25+ ಪದಕಗಳನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಪ್ಯಾರಿಸ್ ವಿಮಾನವೇರಿದ್ದ ಭಾರತೀಯ ಅಥ್ಲೆಟ್ ಗಳು ಶುಕ್ರವಾರ ಪದಕ ಖಾತೆ ತೆರೆದಿದ್ದಾರೆ. ಒಂದೇ ದಿನ ಭಾರತ ಚಿನ್ನ ಸೇರಿ ಒಟ್ಟು 4 ಪದಕಗಳನ್ನು ಮುಡಿಗೇರಿಸಿಕೊಂಡಿದೆ. ಪ್ಯಾರಿಸ್ ಒಲಿಂಪಿಕ್ಸ್ನಂತೆಯೇ ಪ್ಯಾರಾ ಗೇಮ್ಸ್ನಲ್ಲೂ ಶೂಟರ್ಗಳೇ ಪ್ರಾಬಲ್ಯ ಸಾಧಿಸಿದ್ದು, ಮೂರು ಪದಕಗಳನ್ನು ಗೆದ್ದಿದ್ದಾರೆ. ಉಳಿದಂತೆ ಅಥ್ಲೆಟಿಕ್ಸ್ನಲ್ಲೂ ಒಂದು ಪದಕ ಲಭಿಸಿದೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ 2 ಪದಕ ಗೆದ್ದಿದ್ದ ಅವನಿ ಲೇಖರಾ ಈ ಬಾರಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಮಹಿಳೆಯರ 10 ಮೀ. ಏರ್ ರೈಫಲ್ (ಎಸ್ಎಚ್ 1) ವಿಭಾಗದಲ್ಲಿ 22 ವರ್ಷದ ಅವನಿ 249.7 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನ ಪಡೆದರು. ಈ ಮೂಲಕ ಅವರು ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ತಮ್ಮದೇ ಪ್ಯಾರಾಲಿಂಪಿಕ್ಸ್ ದಾಖಲೆಯನ್ನು ಅಳಿಸಿ ಹಾಕಿದರು