ಬೆಂಗಳೂರು : ಮುಂದಿನ ಮೂರು ತಿಂಗಳಲ್ಲಿ ವಂದೇ ಭಾರತ್ ಸ್ಟೀಪರ್ ಕೋಚ್ ರೈಲು ಸಾರ್ವಜನಿಕರ ಓಡಾಟಕ್ಕೆ ಲಭ್ಯವಾಗಲಿದೆ. ಸ್ವದೇಶಿ ನಿರ್ಮಿತ ಈ ರೈಲು ಬಿಇಎಂಎಲ್ ನಿಂದ ಬೆಂಗಳೂರಿನಲ್ಲಿಯೇ ತಯಾರಾಗುತ್ತಿರುವುದು ವಿಶೇಷ ಈ ಮೂಲಕ ವಂದೇ ಭಾರತ್ ಎಕ್ಸ್ಪ್ರೆಸ್ ರಾಷ್ಟ್ರದಲ್ಲಿ ಸಂಪರ್ಕ ಕ್ರಾಂತಿಯನ್ನೇ ಹುಟ್ಟು ಹಾಕುತ್ತಿದೆ.
ನಗರದ ಬಿಇಎಂಲ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಭೇಟಿ ನೀಡಿ ವಂದೇ ಭಾರತ್ ಸ್ವೀಪರ್ ಕೋಚ್ ರೈಲನ್ನು ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲುಗಳನ್ನು ಸಂಚಾರಕ್ಕಾಗಿ ಹಳಿಗೆ ಇಳಿಸುವ ಮೊದಲು ಹತ್ತು ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಇನ್ನು ಮುಂದಿನ ಮೂರು ತಿಂಗಳಲ್ಲಿ ರೈಲು ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗಲಿದೆ ಎಂದು ಹೇಳಿದರು.
ರೈಲಿನಲ್ಲಿ ಪ್ರತಿ ವಿಷಯಗಳನ್ನು ಹೆಚ್ಚು ಕೇಂದ್ರೀಕರಿಸಿ ಸಿದ್ಧಪಡಿಸಲಾಗಿದೆ. ಪ್ರಯಾಣಿಕರು ಮಲಗಿ ಪ್ರಯಾಣಿಸಲು ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಪೂರೈಸಲು ಪ್ರತ್ಯೇಕ ಸಿಬ್ಬಂದಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಇಷ್ಟು ಮಾತ್ರವಲ್ಲದೇ ವಿಶಿಷ್ಟ ಚೇತನರಿಗೆ ಅನುಕೂಲವಾಗುವ ಸಲುವಾಗಿ ಶೌಚಾಲಯ ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದರು
ಇನ್ನು ವಂದೇ ಭಾರತ್ ರೈಲಿನ ಟಿಕೆಟ್ಗಳ ದರವು ಕೈಗೆಟಕುವ ರೀತಿಯಲ್ಲಿರಲಿದ್ದು, ಇದರಲ್ಲಿ ಮಧ್ಯಮ ವರ್ಗದ ಜನರೂ ಕೂಡ ಪ್ರಯಾಣ ಮಾಡಬಹುದಾಗಿದೆ.
-ಅಶ್ವಿನಿ ವೈಷ್ಣವ್, ರೈಲ್ವೆ ಸಚಿವ