ಬೆಂಗಳೂರು : ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನ ಇಂದು ಸೆ.2 ರಿಂದ ಆರಂಭವಾಗಲಿದೆ. ಪಕ್ಷವು ಈ ಬಾರಿ ರಾಜ್ಯದಲ್ಲಿ 50 ಲಕ್ಷ ಹೊಸ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಿದೆ ಎಂದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ
ಕರ್ನಾಟಕದಲ್ಲಿ 2014ರಲ್ಲಿ 74.88 ಲಕ್ಷ ಮತ್ತು 2019ರಲ್ಲಿ 26.86 ಲಕ್ಷ ಹೊಸ ಸದಸ್ಯತ್ವ ಸೇರಿ ಸುಮಾರು 1 ಕೋಟಿ ಸದಸ್ಯತ್ವ ನೋಂದಾಯಿಸಲಾಗಿತ್ತು. ಈ ಬಾರಿ 50 ಲಕ್ಷ ಹೊಸ ಸದಸ್ಯತ್ವ ಸೇರಿ ಒಟ್ಟು 1.5 ಕೋಟಿ ಸದಸ್ಯತ್ವ ದಾಖಲಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ತಂಡಕ್ಕೆ ಗುರಿ ನಿಗದಿಪಡಿಸಿದ್ದಾರೆ