ಕಾರ್ಕಳ : ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳ ಗ್ರಾಮದ ಸಂತೋಷ್ ಟಿ.( 32ವರ್ಷ ) ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪಿ ಎಸ್ ಐ ದೀಲೀಪ್ ಜಿ ಆರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ
ಮನೆಯ ಬೀಗವನ್ನು ಮನೆಯ ಹೊರಗಡೆ ಡಬ್ಬದಲ್ಲಿ ಇರಿಸಿದ್ದ ಬೀಗದ ಕೀಯನ್ನು ಬಳಸಿ ಬಾಗಿಲು ತೆರೆದು, ಮನೆಯ ಒಳಗಡೆ ಪ್ರವೇಶಿಸಿ ಮನೆಯ ಬೆಡ್ ರೂಮ್ನಲ್ಲಿದ್ದ ಗೋದ್ರೆಜ್ ಲಾಕರ್ ಅನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10.05 ಲಕ್ಷ ರೂ. ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವುಗೈಯಲಾಗಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು
ಕಾರ್ಕಳ ಗ್ರಾಮಾಂತರ ಠಾಣೆಯ ಪಿ ಎಸ್ ಐ ದೀಲೀಪ್ ಜಿ ಆರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ಆತ ಕಳವು ಮಾಡಿದ್ದ 10.05 ಲಕ್ಷ ರೂ. ಮೌಲ್ಯದ 33 ಪವನ್ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದೆ.
ದಿಲೀಪ್ ಜಿ.ಆರ್.ನೇತೃತ್ವದ ಪೊಲೀಸರ ತಂಡದ ಕಾರ್ಯಾಚರಣೆಯಲ್ಲಿ ಪಿ ಎಸ್ ಐ ಸುಂದರ್ ಹಾಗೂ ಸಿಬಂದಿಗಳಾದ ಮಹಾಂತೇಶ್, ಪ್ರಶಾಂತ್ ಕೆ., ವಿಶ್ವನಾಥ, ಶಶಿಕುಮಾರ್,ನಾಗರಾಜ, ಗೋವಿಂದ ಆಚಾರಿ, ರಾಘವೇಂದ್ರ, ಅಶೋಕ್ ರವರು ಭಾಗವಹಿಸಿದ್ದರು