Home » ನಾಗಮಂಡಲೋತ್ಸವ ಸಂಪನ್ನ
 

ನಾಗಮಂಡಲೋತ್ಸವ ಸಂಪನ್ನ

by Kundapur Xpress
Spread the love

 

ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ: ಪರಶುರಾಮನ ಸೃಷ್ಠಿಯಾದ ಕರಾವಳಿ ಭಾಗದಲ್ಲಿ ನಾಗದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ನೆಲೆಯಲ್ಲಿ ಸೇವಾಕರ್ತರು ನಡೆಸಿದ ನಾಗಮಂಡಲದಿಂದ ದೇವರು ಸಂತೃಷ್ಟರಾಗಿ ಈ ಸೇವೆಯಿಂದ ಲೋಕ ಕಲ್ಯಾಣವಾಗುವಂತೆ ನಾಗದೇವರು ಅನುಗ್ರಹಿಸಲಿ ಎಂದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ. ಅಣ್ಣಪ್ಪ ಹೆಗ್ಡೆ ನುಡಿದರು.

       ಶ್ರೀ ವೆಂಕಟಾಚಲಯ್ಯ ಅವಧೂತರ ಆಶೀರ್ವಾದದೊಂದಿಗೆ ಬೀಜಾಡಿ ಜಾನಕಿ ಮತ್ತು ರಾಮಚಂದ್ರ ಹಾಗೂ ಕುಟುಂಬಿಕರ ಮೂಲನಾಗಬನ ಬೀಜಾಡಿ ಗ್ರಾಮ ಮೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಕೆಳಬನದಲ್ಲಿ ಸೋಮವಾರ ಜರುಗಿದ ಏಕಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ದೈವರಾಧನೆ ಮತ್ತು ನಾಗರಾಧನೆಯ ಹಿಂದೆ ಈ ಮಣ್ಣಿನ ಸೊಗಡಿದೆ. ಅವಿಭಜಿತ ಜಿಲ್ಲೆಗಳಲ್ಲಿ ಬಿಟ್ಟರೆ ಬೇರೆಲ್ಲೂ ಇದನ್ನು ನೋಡಲು ಸಾಧ್ಯವಿಲ್ಲ. ಹಾಗಾಗಿ ಈ ಕ್ಷೇತ್ರಗಳೆಲ್ಲವೂ ದೇವಭೂಮಿ ಎನ್ನಬಹುದು ಎಂದರು. ಕೋಟೇಶ್ವರ ವಲಯದ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಾದಿರಾಜ್ ಹೆಬ್ಬಾರ್, ರೋಟರಿ ಸಹಾಯಕ ಗವರ್ನರ್ ಪ್ರಭಾಕರ್ ಬಿ. ಕುಂಭಾಶಿ ಸೇವಾಕರ್ತರಾದ ರಾಮಚಂದ್ರ ಮತ್ತು ಕುಟುಂಬಿಕರು ಉಪಸ್ಥಿತರಿದ್ದರು.

 

            ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ಯಕ್ಷಗುರು ಕಡ್ಲೆ ಗಣಪತಿ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಕಲಾಬಳಗದ ವತಿಯಿಂದ ಮಕ್ಕಳ ಯಕ್ಷಗಾನ ಕಂಸ ದಿಗ್ವಿಜಯ ಪ್ರದರ್ಶನಗೊಂಡಿತ್ತು. ಬಿ.ಆರ್. ಅರವಿಂದ್ ಕೋಟೇಶ್ವರ ಸ್ವಾಗತಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ವಂದಿಸಿದರು. ನಾಗಮಂಡಲದಂದು ಕುಂದಾಪುರದ ಶಾಸಕರಾದ ಹಾಲಾಡಿ ಶ್ರೀನಿವಾಶೆಟ್ಟಿಯವರು ಆಗಮಿಸಿ ಶ್ರೀ ದೇವರ ಆಶೀರ್ವಾದ ಪಡೆದರು

   

Related Articles

error: Content is protected !!