Home » ಮೆಸೇಜ್‌ ಓದ್ತಾ ಓದ್ತಾ ಹಲ್ಲೆ ನಡೆಸಿದ ದರ್ಶನ್
 

ಮೆಸೇಜ್‌ ಓದ್ತಾ ಓದ್ತಾ ಹಲ್ಲೆ ನಡೆಸಿದ ದರ್ಶನ್

by Kundapur Xpress
Spread the love

 ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಓದುತ್ತಲೇ ‘ಕಾಮಿಷ್ಟ’ ಎಂದು ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದರು ಎಂಬ ಮಾಹಿತಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.

ನಾನು ದೊಡ್ಡನಟ ಹಾಗೂ ನನಗೆ ಲಕ್ಷಾಂತರ ಅಭಿಮಾನಿಗಳ ಬಳಗವಿದೆ. ನಾನೇನೇ ಮಾಡಿದರೂ ದಕ್ಕಿಸಿಕೊಳ್ಳುವೆ. ನನ್ನನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅಹಂಭಾವದಿಂದಲೇ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿ ದರ್ಶನ್ ಕೊಂದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ

ತಮ್ಮ ಪ್ರಿಯತಮೆ ಪವಿತ್ರಾಗೌಡಗೆ ಗುಪ್ತಾಂಗದ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಸಹಚರರ ಮೂಲಕ ದರ್ಶನ್ ಕರೆತಂದಿದ್ದರು. ಆಗ ಶೆಡ್‌ನಲ್ಲಿ ಮೃತನ ಮೊಬೈಲ್ ಕಸಿದುಕೊಂಡು ಆಶ್ಲೀಲ ಸಂದೇಶಗಳನ್ನು ಓದುತ್ತಲೇ ಮನಬಂದಂತೆ ದರ್ಶನ್ ಚಚ್ಚಿದ್ದರು. ಆತನ ಎದೆ ಹಾಗೂ ಮರ್ಮಾಂಗದ ಮೇಲೆ ದರ್ಶನ್ ಕಾಲಿಟ್ಟು ಕ್ರೌರ್ಯ ಮೆರೆದಿದ್ದರು. ದರ್ಶನ್ ಹಲ್ಲೆ ನಡೆಸಿದ್ದರಿಂದ ತಾವೂ ಪ್ರೇರಣೆಗೊಂಡ ಅವರ ಸಹಚರರು ಸಹ ರೇಣುಕಾಸ್ವಾಮಿ ಮೇಲೆ ಮುಗಿಬಿದ್ದರು ಇದರಿಂದ ರೇಣುಕಾಸ್ವಾಮಿಯ ಸಾವು ಸಂಭವಿಸಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ

   

Related Articles

error: Content is protected !!