ಕೋಟ: ಮಾತೃ ಸಂಸ್ಥೆಗಳಲ್ಲಿನ ಗುರುಗಳನ್ನು ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಗುರುತಿಸಿ ಅಭಿನಂದಿಸುವ ಮೂಲಕ ಇಂದಿನ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಗುರುವಿನ ಮಹತ್ವದ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೆಂಪಿ ರಮಾನಂದ ಭಟ್ ಅಭಿನಂದನಾ ನುಡಿಗಳನ್ನಾದರು.
ಗುರುವಾರ ಕೋಟದ ವಿವೇಕ ವಿದ್ಯಾಸಂಸ್ಥೆಯಲ್ಲಿ ವಿವೇಕ ಹಿಂದಿನ ವಿದ್ಯಾರ್ಥಿ ಸಂಘ, ಕೋಟ ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇದೇ ವೇಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಿಕ್ಷಕರಿಗೆ ಬ್ಯಾಡ್ಜ್ ತೊಡಿಸಿ, ಸಿಹಿತಿಂಡಿಯೊಂದಿಗೆ ಅಕ್ಷರದ ಅರಿವಿನ ಸಂಕೇತವಾಗಿ ಹಳೆ ವಿದ್ಯಾರ್ಥಿ ವೆಂಕಟೇಶ್ ಭಟ್ರ ವರು ನೀಡಿದ ಲೇಖನಿ ಹಾಗೂ ಆರೋಗ್ಯಪೂರಕ ಪಾನೀಯವನ್ನು ವಿತರಿಸಿ ಗೌರವಿಸಿದರು.ಬಾಲಕಿಯರ ಪ್ರೌಢಶಾಲೆಯಲ್ಲಿ ನಿವೃತ್ತ ಪ್ರಾಂಶುಪಾಲ ಎಸ್ ನಾಗೇಶ್ ಶಾನುಭಾಗ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ. ಶ್ರೀಪತಿ ಹೇರ್ಳೆ ಶಿಕ್ಷಕರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಎಚ್ ವೆಂಕಟರಮಣ ಸೋಮಯಾಜಿ, ಕೆ ಜನಾರ್ದನ ಹಂದೆ, ಸುಧಾಕರ್, ರೇವತಿ ಐತಾಳ, ಸುಶೀಲಾ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.ಸಂಸ್ಥೆಯ ಎರಡು ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಜಗದೀಶ ನಾವಡ ,ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಕೆ ಜಗದೀಶ ಹೊಳ್ಳ ಸ್ವಾಗತಿಸಿ, ಹಿರಿಯ ಸಹ ಶಿಕ್ಷಕ ಎ.ವೆಂಕಟೇಶ ಉಡುಪ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪ್ರೀತಿರೇಖಾ ಧನ್ಯವಾದ ಸಮರ್ಪಿಸಿದರು.