10 ಲಕ್ಷ ರೂ. ಮೊತ್ತದ ಚೆಕ್ ವಿತರಣೆ
ಕುಂದಾಪುರ: ಉಪ್ರಳ್ಳಿ ಶ್ರೀ ಕಾಳಿಕಾಂಬ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 10 ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಕಾರ್ಯಕ್ರಮ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರಗಿತು.
ಕುಂದಾಪುರ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರ ಶಿಫಾರಸಿನ ಮೇರೆಗೆ, ತ್ರಾಸಿ ಸುಧಾಕರ ಆಚಾರ್ಯ ಅವರ ಸಹಕಾರದೊಂದಿಗೆ ಧ. ಗ್ರಾ. ಯೋಜನೆಯ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ 10 ಲಕ್ಷ ರೂ. ಮಂಜೂರು ಮಾಡಿದ್ದರು. ಯೋಜನೆಯ ಉಡುಪಿ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಅವರು ಮಂಜೂರಾತಿ ಪತ್ರವನ್ನು ದೇವಸ್ಥಾನದ ಆಡಳಿತ ಮೋಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ ಅವರಿಗೆ ಹಸ್ತಾಂತರಿಸಿದರು.
ಬೈಂದೂರು ತಾ| ಯೋಜನಾಧಿಕಾರಿ ವಿನಾಯಕ ಪೈ, ಉಡುಪಿ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಅಮೃತ, ಬೈಂದೂರು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ ಆಚಾರ್ಯ ತ್ರಾಸಿ, ವಲಯ ಮೇಲ್ವಿಚಾರಕ ರಾಘವೇಂದ್ರ, ವಲಯ ಅಧ್ಯಕ್ಷ ದಿನೇಶ್ ಆಚಾರ್ಯನೀರ್ಕೆರೆ, ಯೋಜನೆಯ ಉಳ್ಳೂರು – 11ರ ಒಕ್ಕೂಟದ ಕಾರ್ಯದರ್ಶಿ ಸುಮಾ, ಸೇವಾ ಪ್ರತಿನಿಧಿ ಉಮೇಶ್, ಕಾಳಿಕಾಂಬಾ ದೇವಸ್ಥಾನದ 2 ಮತ್ತು 3ನೇ ಮೋಕ್ತೇಸರರಾದ ಪ್ರಭಾಕರ ಆಚಾರ್ಯ ಚಿತ್ತೂರು, ಶ್ರೀಧರ್ ಆಚಾರ್ಯ ಆಲೂರು, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕೊಡ್ಲಾಡಿ, ಆಡಳಿತ ಸಮಿತಿಯ ಸದಸ್ಯರು, ಅರ್ಚಕರು, ಮಾಗಣಿ ಮೋಕ್ತೇಸರರು ಉಪಸ್ಥಿತರಿದ್ದರು.