ಕೋಟ : ಯಕ್ಷಗಾನದ ಮೌಲ್ಯಗಳು ಉಳಿಯಲು ಯಕ್ಷಗುರುಗಳ ಪಾತ್ರ ಮಹತ್ವವಾದದ್ದು ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಇದರ ವತಿಯಿಂದ ನಡೆಸುವ ಯಕ್ಷಗಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನ ಈ ಕರಾವಳಿ ಮೂಲ ಸ್ವರೂಪದ ಕಲೆಯಾಗಿದೆ ಇದನ್ನುಮುಂದಿನ ತಲೆಮಾರಿನತ್ತ ಕೊಂಡ್ಯೋಯಬೇಕಾದರೆ ಗುರುಗಳ ಪಾತ್ರ ಅಂತಿಮವಾಗಿದೆ ಈ ದಿಸೆಯಲ್ಲಿ ಸಾಕಷ್ಟು ಹಿರಿಯ ಯಕ್ಷ ಕಲಾವಿದರು ಇದರ ಬಗ್ಗೆ ಕಾರ್ಯನಿರ್ವಹಿಸುತ್ತಿರಯವುದು ಶ್ಲಾಘನೀಯ ಎಂದರು.
ಯಕ್ಷಗಾನ ತರಬೇತುದಾರ, ಯಕ್ಷಗುರು ಕೊಯ್ಕೂರು ಸೀತಾರಾಮ ಶೆಟ್ಟಿ ಅವರು ಹೆಜ್ಜೆ ಗುರುತು ನೀಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕೋಟ ಗ್ರಾ.ಪಂ ಸದಸ್ಯರಾದ ಪ್ರಶಾಂತ್ ಹೆಗ್ಡೆ ದ್ಯಾವಸ,ಕೋಟ ಸಿ ಎ ಬ್ಯಾಂಕ್ ಶಾಖಾ ಪ್ರಭಂದಕ ಅಜಿತ್ ಶೆಟ್ಟಿ ಕೊಯ್ಕೂರು,ದೇಗುಲದ ಜೀರ್ಣೊದ್ಧಾರ ಸಮಿತಿಯ ಪ್ರಮುಖರಾದ ರಾಜೇಂದ್ರ ಉರಾಳ,ಅಪ್ಪು ಅಟ್ಯಾಕರ್ಸ್ ತಂಡದ ಸದಸ್ಯರು ಇದ್ದರು.