ಕುಂದಾಪುರ : ಎಂ ಐ ಟಿ ಕುಂದಾಪುರದಲ್ಲಿ ವ 17ನೇ ಬ್ಯಾಚ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು.ಮಿರಾಪ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಹಾರ್ಡ್ವೇರ್ ಇಂಜಿನಿಯರಿಂಗ್ ಉಪಾಧ್ಯಕ್ಷರಾದ ಶ್ರೀ ವಿನೋದ್ ಜಾನ್ ಮುಖ್ಯ ಅತಿಥಿಯಾಗಿದ್ದರು. ಶ್ರೀ ವಿನೋದ್ ಜಾನ್ ಅವರು ತಮ್ಮ ಪದವಿ ಪ್ರಧಾನ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಗುರಿಗಳನ್ನು ಹೊಂದಲು ಸಲಹೆ ನೀಡಿದರು ಮತ್ತು ಪ್ರಾಮಾಣಿಕತೆ, ವಿನಮ್ರತೆ ಮತ್ತು ಕಠಿಣ ಪರಿಶ್ರಮವು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ನಿಮ್ಮ ಭವಿಷ್ಯದ ಸಾಧನೆಗಳು ನಿಮ್ಮ ಜೀವನದಲ್ಲಿ ನೀವು ಮಾಡುವ ಆಯ್ಕೆಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಗಮಿಸಿದ ಒರ್ಡ್ರಿಯೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸುಮಂತ್ ಶೆಟ್ಟಿ ಮಾತನಾಡಿ, ಪದವೀಧರರು ತಮ್ಮ ಗುರಿಗಳನ್ನು ತಲುಪಲು ಇನ್ನೂ ಕೆಲವು ವರ್ಷಗಳವರೆಗೆ ಕಲಿಯಬೇಕು ಎಂದು ಸಲಹೆ ನೀಡಿದರು. ತಮ್ಮ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಎಂ ಐ ಟಿ ಕುಂದಾಪುರದ ವಿದ್ಯಾರ್ಥಿಗಳ ಕಾರ್ಯವೈಖರಿಯನ್ನ ಹೊಗಳಿದರು.ವೇದಿಕೆಯಲ್ಲಿರುವ ಗೌರವಾನ್ವಿತರು ವಿದ್ಯಾರ್ಥಿ ಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ವಿವಿಧ ವಿಭಾಗಳಲ್ಲಿ ಉನ್ನತ ಅಂಕ ಪಡೆದವರಿಗೆ ಪದಕಗಳನ್ನು ವಿತರಿಸಿದರು.
ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ ಅವರು ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶ್ರಮವಹಿಸಿ ದುಡಿದು ತಮ್ಮ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿ ತರುವಂತೆ ತಿಳಿಸಿದರು. ದೂರದೃಷ್ಟಿಯುಳ್ಳ, ಸ್ಥಾಪಕ ಅಧ್ಯಕ್ಷ, ದಿವಂಗತ ಶ್ರೀ ಐ ಎಂ ಜಯರಾಮ ಶೆಟ್ಟಿ ಮತ್ತು ಪ್ರಸ್ತುತ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ ಶೆಟ್ಟಿ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಅಧ್ಯಯನ ಮಾಡಲು ಅದ್ಭುತ ಅವಕಾಶ ಒದಗಿಸಿದ್ದಕ್ಕೆ ಶ್ಲಾಘಿಸಿದರು. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲದೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಓದುತ್ತಿದ್ದಾರೆಂದು ತಿಳಿಸಿದರು.ಎಂಐಟಿಕೆ ಯ ಉಪ ಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ ಅವರು ಪದವೀಧರರಿಗೆ ಪ್ರಮಾಣ ವಚನ ಬೋಧಿಸಿದರು.ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಕಾರ್ಯಕ್ರಮ ಸಂಯೋಜಕರಾದ ಪ್ಲೇಸ್ಮೆಂಟ್ ಡೀನ್ ಪ್ರೊಫೆಸರ್ ಅಮೃತಮಾಲ ಎಲ್ಲಾ ವಿಭಾಗ ಮುಖ್ಯಸ್ಥರು, ಸಿಬ್ಬಂದಿಗಳು, ಪದವೀಧರರು ಮತ್ತು ಅವರ ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ. ಫರಾನಾ ಸಮಾರಂಭ ನಡೆಸಿಕೊಟ್ಟರು. ಪ್ರಾಧ್ಯಾಪಕಿ ಶ್ರೀನಿಧಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕಿ ತಿಲಕಲಕ್ಷ್ಮಿ ಸ್ವಾಗತಿಸಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.