Home » ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ
 

ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲ

ರಾಹುಲ್‌ ಗಾಂಧಿ ಆರೋಪ

by Kundapur Xpress
Spread the love

ವಾಷಿಂಗ್ಟನ್ : ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಅಮೆರಿಕದ ಕೆಲವು ಸಂಘಟನೆಗಳು ಪ್ರತಿ ವರ್ಷ ಸಲ್ಲದ ಆರೋಪ ಮಾಡಿಕೊಂಡು ಬಂದಿರುವ ನಡುವೆಯೇ, ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅವರು ‘ಸಿಖ್ ಸಮುದಾಯಕ್ಕೆ ಪೇಟ ಧರಿಸಲು ಅವಕಾಶ ನೀಡುತ್ತಿಲ್ಲ’ ಎಂದು ಉದಾಹರಣೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ, 1984ರಲ್ಲಿ ಸಿಖ್ ಹತ್ಯಾ ಕಾಂಡ ನಡೆಸಿದ ಕಾಂಗ್ರೆಸ್ ಪಕ್ಷವೇ ಇದೀಗ ಓಲೈಕೆ ರಾಜಕಾರಣಕ್ಕಾಗಿ ಇಂಥ ಮಾತುಗಳನ್ನು ಆಡುತ್ತಿದೆ ರಾಹುಲ್‌ಗೆ ಧೈರ್ಯ ವಿದ್ದರೆ ಭಾರತಕ್ಕೆ ಬಂದು ಈ ಮಾತುಗಳನ್ನು ಪುನರುಚ್ಚರಿಸಲಿ. ಅವರನ್ನು ನ್ಯಾಯಾಲಯದ ಮೆಟ್ಟಿಲೇರಿಸುತ್ತೇವೆ’ ಎಂದು ಸವಾಲು ಹಾಕಿದ್ದಾರೆ. 

ವರ್ಜೀನಿಯಾದ ಹೆರ್ನಡಾನ್‌ನಲ್ಲಿ ಸಿಖ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಹುಲ್, ‘ಭಾರತದಲ್ಲೀಗ ಯುದ್ಧ ನಡೆಯುತ್ತಿರುವುದು ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆಸಿಖ್ಖರಿಗೆ ಕಡಾ ಧರಿಸಲು ಅವಕಾಶ ನೀಡಬೇಕೋ? ಬೇಡವೋ? ಎಂಬುದರ ಬಗ್ಗೆ ಇಂಥದ್ದರ ಬಗ್ಗೆಯೇ ಇದೀಗ ಭಾರತದಲ್ಲಿ ಯುದ್ಧ ನಡೆಯುತ್ತಿದೆ. ಜೊತೆಗೆ ಇದು ಕೇವಲ ಸಿಖ್ಖರಿಗೆ ಮಾತ್ರ ಸಂಬಂಧಪಟ್ಟಿಲ್ಲ. ಬದಲಾಗಿ ‘ಎಲ್ಲಾ ಧರ್ಮೀಯರಿಗೂ ಹೀಗೆ ಧಾರ್ಮಿಕ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ’ ಎಂದಿದ್ದಾರೆ.

ಬಿಜೆಪಿ ತಿರುಗೇಟು : ರಾಹುಲ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್, ‘1984ರಲ್ಲಿ 3000ಕ್ಕೂ ಹೆಚ್ಚು ಸಿಬ್ಬರ ಪೇಟ ಕಿತ್ತೆಸೆದು, ಅವರ ಗಡ್ಡ ಬೋಳಿಸಿ ಅವರನ್ನು ಹತ್ಯೆ ಮಾಡಲಾಯಿತು. ಆದರೆ ತಮ್ಮದೇ ಸರ್ಕಾರದ ಅವಧಿಯ ಇತಿಹಾಸದ ಈ ಪುಟಗಳ ಬಗ್ಗೆ ರಾಹುಲ್ ಪ್ರಸ್ತಾಪ ಮಾಡಲಿಲ್ಲ. ನಿಮಗೆ ಧೈರ್ಯವಿದ್ದರೆ ಇದೇ ಮಾತುಗಳನ್ನು ಭಾರತದಲ್ಲಿ ಬಂದು ಪುನರುಚ್ಚಾರ ಮಾಡಿ. ನಾನು ನಿಮ್ಮ ವಿರುದ್ದ ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ. ಇನ್ನು ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಮಾತನಾಡಿ ‘ನಾನು 6 ದಶಕಗಳಿಂದ ಹೆಮ್ಮೆಯಿಂದ ಪೇಟ ಧರಿಸುತ್ತಿದ್ದೇನೆ. ಸಿಖ್ ಸಮುದಾಯ ಸುರಕ್ಷಿತ ಆಗಿದೆ’ ಎಂದಿದ್ದಾರೆ

   

Related Articles

error: Content is protected !!