Home » ಅಪರಾಧ ಸುದ್ದಿಗಳು
 

ಅಪರಾಧ ಸುದ್ದಿಗಳು

by Kundapur Xpress
Spread the love

ವಿಷ ಸೇವಿಸಿ ವ್ಯಕ್ತಿ ಸಾವು

ಕುಂದಾಪುರ: ಮಂಡಿನೋವಿಗೆ ಸಂಬಂಧಿಸಿದ ಔಷಧ ಎಂದು ತಿಳಿದು ಅಡಕೆ ಗಿಡಕ್ಕೆ ಹಾಕುವ ವಿಷದ ಔಷಧ ಸೇವಿಸಿ ವ್ಯಕ್ತಿ ಮೃತಪಟ್ಟ ಘಟನೆ ಮಡಾಮಕ್ಕಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶಿವರಾಮ(74) ಎಂಬವರು ಮಂಡಿ ನೋವಿನಿಂದ ಬಳಲುತ್ತಿದ್ದು, ಶಿವಮೊಗ್ಗದಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ನೋವು ಗುಣಮುಖವಾಗಲೆಂದು ಪ್ರತಿದಿನವು ಸಿರಪ್ ಸೇವಿಸುತ್ತಿದ್ದರು. ಇನ್ನೊಂದೆಡೆ ದೃಷ್ಟಿ ದೋಷವು ಇದ್ದು ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ.  ರಾತ್ರಿ ವೇಳೆ  ಸಿರಪ್ ಎಂದು ಭಾವಿಸಿ ಕೈತಪ್ಪಿನಿಂದ ಅಡಕೆ ಗಿಡಕ್ಕೆ ಹಾಕುವ ವಿಷದ ಔಷಧ ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆಯ ಬಗ್ಗೆ ಅವರನ್ನು ಮಂಗಳೂರಿನ  ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಮಹಿಳೆ ಆತ್ಮಹತ್ಯೆ

ಕುಂದಾಪುರ : ಉಳ್ಳೂರು 74 ಗ್ರಾಮದ ನಿವಾಸಿ ಸುನೀತಾ(42) ಮನೆ ಸಮೀಪದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮಾನಸಿಕ ಕಾಯಿಲೆ ಯಿಂದ ಬಳಲುತ್ತಿರುವ ಇವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗುಣಮುಖವಾಗದ ಕಾಯಿಲೆ ಮನನೊಂದು ಕಾಲುವೆ ಹಾರಿದ್ದು ಸಿಮೆಂಟ್ ದಂಡೆ ಮೇಲೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪುತ್ರ ಸುಮಂತ್ ) ನೀಡಿದ ದೂರಿನಂತೆ ಶಂಕರನಾರಾಯಣ ಪ್ರಕರಣ ದಾಖಲಾಗಿದೆ

ಕರಿಮಣಿ ಸರ ಕಳವು

ಕುಂದಾಪುರ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಹಾರ ಸರಬರಾಜು ಇಲಾಖೆಯಲ್ಲಿ ಖಾಸಗಿಯಾಗಿ ಕೆಲಸ ಮಾಡಿ ಕೊಂಡಿರುವ ಸಾಕು ಕುಂದಬಾರಂದಾಡಿ ಎಂಬವರ ಕುತ್ತಿಗೆಯಿಂದ ಕರಿಮಣಿ ಸರವನ್ನು ಯಾರೋ ಕಳವು ಮಾಡಿದ್ದಾರೆ.

ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟು ಮುಳ್ಳಿಕಟ್ಟೆ ಯಲ್ಲಿ ಖಾಸಗಿ ಬಸನ್ನೇರಿ ಕುಂದಾಪುರ ಶಾಸ್ತ್ರೀ ಸರ್ಕಲ್ ನಲ್ಲಿ ಇಳಿದಿದ್ದು ಕುತ್ತಿಗೆ ನೋಡು ವಾಗ 24 ‘ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಇಲ್ಲವಾಗಿತ್ತು. ಬಸ್‌ನಲ್ಲಿ ಪಯಣಿಸು ತ್ತಿರುವ ಹೊತ್ತಲ್ಲಿ ಯಾರೊ ಕಳ್ಳರು ಕಳವು ಮಾಡಿದ್ದಾರೆ ಎಂದು ಅವರು ದೂರು ನೀಡಿದ್ದು ಕಳವಾದ ಸೊತ್ತಿನ ಮೌಲ್ಯ 1.20 ಲಕ್ಷ ರೂ. ಎಂದು ಕುಂದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 ಕೆಲಸ ಕೊಡಿಸುವುದಾಗಿ ವಂಚನೆ

ಕುಂದಾಪುರ : ಕೋಟ ವ್ಯಾಪ್ತಿಯ ನಿವಾಸಿ ಅಕ್ಷತಾ (26) ಎಂಬವರಿಗೆ ಮೊಬೈಲ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ಬಂದ ಜಾಹೀರಾತು ನಂಬಿ ಇವರು ಲಿಂಕ್ ಒತ್ತಿದ್ದು 9 ಆರ್ಡರ್ ಮುಗಿಸುವಂತೆ ಆದೇಶ ಬಂದಿತ್ತು. ಅದನ್ನು ನಂಬಿ ಹಂತಹಂತವಾಗಿ 67,330 ರೂ. ಪಾವತಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಯಾವುದೇ ಬೋನಸ್ ನೀಡದೆ ವಂಚನೆ ಎಸಗಿದ್ದಲ್ಲದೆ ಪಾವತಿಸಿದ್ದ ಹಣ ವಾಪಸ್ ನೀಡದೆ ವಂಚನೆ ಎಸಗಿದ್ದಾರೆ ಎಂದು  ಪ್ರಕರಣ ದಾಖಲಾಗಿದೆ.

   

Related Articles

error: Content is protected !!