Home » ಮಹೇಶ ಹೈಕಾಡಿ : ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ
 

ಮಹೇಶ ಹೈಕಾಡಿ : ಉಡುಪಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ

ಕನ್ನಡ ಭಾಷಾ ಶಿಕ್ಷಕ

by Kundapur Xpress
Spread the love

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಕಾರ , ಸಂಸ್ಕೃತಿಯ ತಳಹದಿಯ ಮೇಲೆ ಭಾರತೀಯ ಚಿಂತನೆವುಳ್ಳ ಶಿಕ್ಷಣವನ್ನು ನೀಡುತ್ತ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡುತ್ತ ಹೆಸರುವಾಸಿಯಾಗಿರುವ ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಭಾಗದ ಕನ್ನಡ ಭಾಷಾ ಶಿಕ್ಷಕ ಮಹೇಶ್ ಹೈಕಾಡಿ ಯವರಿಗೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಲಭಿಸಿದೆ.2012 ರಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತ ಶಾಲೆಯ ವಿವಿಧ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಪ್ರಾರಂಭದಲ್ಲಿ ಭಾಷಾ ಶಿಕ್ಷಕರಾಗಿ ಅನಂತರ ಅಮೃತಭಾರತಿ ಕನ್ನಡ ಮಾಧ್ಯಮ ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿಯನ್ನು ಸಲ್ಲಿಸಿದ್ದಾರೆ.

ಶಾಲೆಯಿಂದ ಮನೆಗೊಂದು ಪತ್ರಿಕೆ ಅಮೃತವಾಣಿ ಹಸ್ತಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ 2013 ರಿಂದ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.2015 – 16 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಮತ್ತು ತೃತೀಯ ಭಾಷೆ ಕನ್ನಡದಲ್ಲಿ ವಿದ್ಯಾರ್ಥಿಗಳು ಗರಿಷ್ಠ ಸರಾಸರಿ ಅಂಕವನ್ನು ದಾಖಲಿಸಿರುತ್ತಾರೆ.2015-16 ನೇ ಸಾಲಿನ ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ ಮತ್ತು ತೃತೀಯ ಭಾಷೆ ಕನ್ನಡದಲ್ಲಿ ಗರಿಷ್ಠ ಸರಾಸರಿ ಅಂಕ ಪಡೆದು ಇದಕ್ಕಾಗಿ ಅವರಿಗೆ ಜಿಲ್ಲಾ ಸಾಧಕ ಪ್ರಶಸ್ತಿ ಲಭಿಸಿದೆ.ಪ್ರಸ್ತುತ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಉಪಮುಖ್ಯೋಪಾಧ್ಯಾಯರಾಗಿ ಕನ್ನಡ ಭಾಷಾ ಶಿಕ್ಷಕರಾಗಿ ಕರ್ತವ್ಯವನ್ನು ಸಲ್ಲಿಸುತ್ತಿದ್ದಾರೆ.

2015 ರಲ್ಲಿ ಚಿತ್ರದುರ್ಗ ಸಿರಿಗನ್ನಡ ಪ್ರಕಾಶನ ಬಳಗದ ವತಿಯಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಸಂಘಟಿಸಿದ ಸಾಧನೆಗಾಗಿ ಕನ್ನಡ ರತ್ನ ಪ್ರಶಸ್ತಿ ಲಭಿಸಿದೆ‌.ಕರ್ನಾಟಕ ಪ್ರತಿಭಾ ಅಕಾಡೆಮಿ ಬೆಂಗಳೂರು ವಿದ್ಯಾರ್ಥಿಗಳಿಗಾಗಿ ಸಂಘಟಿಸಿದ ಸ್ಪರ್ಧೆಯಲ್ಲಿ 230 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಪ್ರಬಂಧ ಸ್ಪರ್ಧೆಯನ್ನು ಯಶಸ್ವಿಯಾಗಿ ಸಂಘಟಿಸಿ 2017 ರ ಶಿಕ್ಷಕ ದಿನಾಚರಣೆಯಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ ರತ್ನ ಡಾಕ್ಟರ ರಾಧಾಕೃಷ್ಣನ್ ಪ್ರಶಸ್ತಿಯನ್ನು ಪಡೆದರು‌.ಶಿಕ್ಷಣ ಕ್ಷೇತ್ರದಲ್ಲಿನ ಸಮಗ್ರ ಚಟುವಟಿಕೆಗಳನ್ನು ಪರಿಗಣಿಸಿ 2020 ರಲ್ಲಿ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಮತ್ತು ಅನುದಾನ ರಹಿತ ಉಪನ್ಯಾಸಕರ ಸಂಘದ ವತಿಯಿಂದ ರಾಜ್ಯಮಟ್ಟದ ಶಿಕ್ಷಕ ರತ್ನ ಪ್ರಶಸ್ತಿಯ ಗೌರವ ಸಂದಿದೆ.

2022ರಲ್ಲಿ ಯಕ್ಷರಂಗ ಮಣಿಪಾಲ ಇವರು ನೀಡುವ ದತ್ತಿ ನಿಧಿ ಪ್ರಶಸ್ತಿ ಯಾದ ಮಿತ್ರ ಶ್ರೀ ಪ್ರಶಸ್ತಿಯನ್ನು ಪಡೆದಿರುತ್ತಾರೆ .
ಕರೋನ ಸಂದರ್ಭದಲ್ಲಿ ಕನ್ನಡ ವ್ಯಾಕರಣವನ್ನು ಸಂಪೂರ್ಣವಾಗಿ 88 ಕಂತುಗಳಲ್ಲಿ ವಿಡಿಯೋ ರಚಿಸಿರುತ್ತಾರೆ.ಕನ್ನಡ ಪಾಠಕ್ಕೆ ಸಂಬಂಧಪಟ್ಟಂತಹ ನಾಟಕಗಳನ್ನ ವಿದ್ಯಾರ್ಥಿಗಳ ಮೂಲಕ ಅಭಿನಯಿಸಿ ಕಲಿಕೆಗೆ ಪ್ರೋತ್ಸಾಹ ನೀಡುವುದು ಕನ್ನಡ ಟಿ.ಎಲ್.ಎಂ ರಚನೆಯ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಸುಲಭಗೊಳಿಸುವುದು.ಕನ್ನಡ ವ್ಯಾಕರಣವನ್ನು ಪದ್ಯಗಳ ರೂಪದಲ್ಲಿ ರಚಿಸಿ ರಾಗಬದ್ಧಗೊಳಿಸಿ ವಿದ್ಯಾರ್ಥಿಗಳ ಮೂಲಕ ಪದ್ಯವನ್ನು ಹಾಡಿಸುವುದು.12 ವರ್ಷದಿಂದ ಪ್ರಥಮ ಮತ್ತು ತೃತೀಯ ಭಾಷೆ ಕನ್ನಡ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ದಾಖಲಿಸುತ್ತ ಬಂದಿರುತ್ತಾರೆ.ಸಂಸ್ಥೆಯಲ್ಲಿ ಸಿ‌.ಸಿ.ಎ ಚಟುವಟಿಕೆಯಲ್ಲಿ ಕೌಶಲ್ಯಾಭಿವೃದ್ಧಿ ವಿಭಾಗದಲ್ಲಿ 25 ವಿದ್ಯಾರ್ಥಿಗಳಿಗೆ ಒಂದು ವರ್ಷ ಉಚಿತವಾಗಿ ವಿದ್ಯಾರ್ಥಿಗಳಿಗೆ ನಿರೂಪಣೆಯನ್ನು ಮಾಡುವ ತರಬೇತಿಯನ್ನು ನೀಡಿರುತ್ತಾರೆ.

ರಾಜ್ಯಮಟ್ಟ,ಜಿಲ್ಲಾಮಟ್ಟದ ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ರಚನೆಯಲ್ಲಿ ಭಾಗವಹಿಸಿರುತ್ತಾರೆ.ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿಯಾಗಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಲವಾರು ರೀತಿಯ ಸ್ಪರ್ಧೆಗಳನ್ನು ಮತ್ತು ತರಬೇತಿಗಳನ್ನು ಸಂಘಟಿಸಿರುತ್ತಾರೆ.
ಕನ್ನಡ ಸಾಹಿತ್ಯ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಘಟಕದ ಸದಸ್ಯರಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.ಕಾವ್ಯೋತ್ಸವ ಕವನ ಸಂಕಲನಗಳ ಸಂಪಾದನೆ, ಮಕ್ಕಳ ಕಥೆಗಳು ಕಥಾ ಸಂಕಲನ ಮತ್ತು ವರ್ಣಮಾಲೆ ಕವನ ಸಂಕಲನಗಳು ಇವರ ಮಾರ್ಗದರ್ಶನದಲ್ಲಿ ಪ್ರಕಟಗೊಂಡಿರುತ್ತದೆ.

2024 – 25 ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಹೆಬ್ರಿ ತಾಲೂಕು ಸಂಚಾಲಕರಾಗಿ ಆಯ್ಕೆಗೊಂಡಿರುತ್ತಾರೆ.ವಿದ್ಯಾಭಾರತಿ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಜವಾಬ್ದಾರಿ.ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ ಹೈಕಾಡಿ ಇದರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.ಸಂಸ್ಥೆಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮನ ತೊಡಗಿಸಿಕೊಂಡು ಸಕ್ರಿಯ ಶಿಕ್ಷಕರಾಗಿ ಆಡಳಿತ ಮಂಡಳಿಯ ಮನಸ್ಸನ್ನು ಗೆದ್ದಿರುತ್ತಾರೆ.ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿರುತ್ತಾರೆ.ವಿದ್ಯಾಭಾರತಿ ಕರ್ನಾಟಕ ಶೈಕ್ಷಣಿಕ ಸಹಮಿಲನ ಸನ್ಮಾನ,ಜೇಸಿಐ ಕುಂದಾಪುರ ಸಿಟಿ ಇವರಿಂದ ಕೊಡಲ್ಪಟ್ಟ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಯು.ಎಸ್ ನಾಯಕ್ ಪ್ರೌಢಶಾಲೆ ಪಟ್ಲ ವತಿಯಿಂದ ಸನ್ಮಾನ ಹೀಗೆ ಹಲವಾರು ಗೌರವ ಲಭಿಸಿದೆ.

ಛತ್ರಪತಿ ಪೌಂಢೇಶನ ಕಾರ್ಕಳ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ.ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯೋತ್ಸವ ಸಂಬಂಧ ಕರ್ನಾಟಕ ಸರ್ಕಾರದ ಗೀತಗಾಯನ,ಮಾತಾಡ್ ಮಾತಾಡ್ ಕನ್ನಡ ಆಂದೋಲನದಲ್ಲಿ ಭಾಗವಹಿಸಿ ಪ್ರಮಾಣ ಪತ್ರ ಪಡೆದಿರುತ್ತಾರೆ.ಪ್ರಸ್ತುತ ಆದರ್ಶ ಚಾರಿಟೇಬಲ್ ಟ್ರಸ್ಟ್,ಆದರ್ಶ ಆಸ್ಪತ್ರೆ ಉಡುಪಿ ಮತ್ತು ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ಡಾ// ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ಜಯಂತಿ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಯಂದು ಆದರ್ಶ ಶಿಕ್ಷಕ ಪ್ರಶಸ್ತಿ – 2024 ನೀಡಿ  ಗೌರವಿಸಿದೆ.

   

Related Articles

error: Content is protected !!