ಹೊಸದಿಲ್ಲಿ: ಅಮೆರಿಕದ ಸಂಸದೆ ಇಲ್ವಾನ್ ಒಮರ್ ಅವರನ್ನು ಭೇಟಿಯಾದ ಬಳಿಕ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.. ಕಾಂಗ್ರೆಸ್ ದೇಶದ ವಿರುದ್ದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
ಭಾರತದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪಾಕಿಸ್ತಾನ ಪ್ರಾಯೋಜಿತ ಭಾರತ ವಿರೋಧಿ ಧ್ವನಿ, ತೀವ್ರಗಾಮಿ ಇಸ್ಲಾಮಿಸ್ಟ್ ಮತ್ತು ಸ್ವತಂತ್ರ ಕಾಶ್ಮೀರದ ವಕೀಲೆ ಇಲ್ವಾನ್ ಒಮರ್ ಅವರನ್ನು ಅಮೆರಿಕದಲ್ಲಿ ಭೇಟಿಯಾಗಿದ್ದಾರೆ. ಪಾಕಿಸ್ತಾನಿ ನಾಯಕರೂ ಅಂತಹ ಹುಚ್ಚು ವಿಚಾರವಾದಿಗಳ ಬಗ್ಗೆ ಜಾಗರೂಕರಾಗಿರುತ್ತಾರೆ. ಆದರೆ ಕಾಂಗ್ರೆಸ್ ಮಾತ್ರ ಈಗ ಭಾರತದ ವಿರುದ್ಧ ಬಹಿರಂಗವಾಗಿ ಕೆಲಸ ಮಾಡುತ್ತಿದೆ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.
ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಮಾತನಾಡಿ, ರಾಹುಲ್ ಗಾಂಧಿ ಈ ಬಾರಿ ಘೋಷಿತ ಭಾರತ ವಿರೋಧಿ ಸಂಸದರನ್ನು ಭೇಟಿಯಾದ ಭಾರತದ ಮೊದಲ ವಿರೋಧ ಪಕ್ಷದ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ ಎಂದಿದ್ದಾರೆ