ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಪೂಜಿಸಲ್ಪಟ್ಟ ಕೋಟ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 49ನೇ ವರ್ಷದ ಗಣೇಶ ಉತ್ಸವ ಸಂಪನ್ನಗೊಡಿತು.
ಬುಧವಾರ ಕೋಟದ ಗಣಪನಿಗೆ ನಡೆದ ಮೂಡುಗಣಪತಿ ಸೇವೆ,ವಿವಿಧ ಪೂಜಾ ಕಾರ್ಯಗಳ ನಡುವೆ ಕೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟ ಪುರಮೆರವಣಿಗೆ ಸುಮಾರು 15 ಕಿಮೀ ಕ್ರಮಿಸಿಕೊಂಡು ಭಕ್ತಾಧಿಗಳ ಸಮ್ಮುಖದಲ್ಲಿ ಕೋಟ ಪಡುಕಡಲ ಸಮುದ್ರದಲ್ಲಿ ವಿಸರ್ಜನೆಗೊಳಿಸಲಾಯಿತು.
ಮೆರವಣಿಗೆಯಲ್ಲಿ ವಿವಿಧ ಸಂಘ ಸಂಸ್ಥೆಗಳಾದ ಜನತಾ ಫಿಶ್ ಮಿಲ್,ಬಾರಿಕೆರೆ ಯುವಕ ಮಂಡಲ,ಅಮೃತ ಯುವಕ ಸಂಘ ಕದ್ರಿಕಟ್ಟು,ಅರ್ಚಕರ ಯುವ ಸಂಘ ಕೋಟ,ಹರ್ತಟ್ಟು ಯುವಕ ಮಂಡಲ ಕೋಟ,ಬಾಳೆಬೆಟ್ಟು ಫ್ರೆಂಡ್ಸ್ ಮಣೂರು ಇವರುಗಳ ಸ್ಥಬ್ಧ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು.
ವಿವಿಧ ಭಾಗಗಳಲ್ಲಿ ಕೋಟ ಜೀವನ್ ಮಿತ್ರ ಸೇವ ಟ್ರಸ್ಟ್,ಜನತಾ ಸಂಸ್ಥೆಗಳು ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಪಾನೀಯ ಉಪಹಾರದ ವ್ಯವಸ್ಥೆ ಕಲ್ಪಿಸಿದರು.
ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ,ಅಧ್ಯಕ್ಷ ರಮನಾಥ ಜೋಗಿ,ಕಾರ್ಯಾಧ್ಯಕ್ಷ ಪ್ರಭಾಕರ್ ಅಡಿಗ,ಕಾರ್ಯದರ್ಶಿ ಚಂದ್ರಯ್ಯ ಆಚಾರ್,ಕೋಶಾಧಿಕಾರಿ ಶೀಲರಾಜ್ ಕಾಂಚನ್ ಮತ್ತಿತರರರು ಭಾಗಿಯಾದರು