ಕೋಟ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ ವಲಯ,ಸ ಕಿ. ಪ್ರಾ. ಶಾಲೆ ಗೋಳಿಬೆಟ್ಟು , ಸ.ಕಿ. ಪ್ರಾ. ಶಾಲೆ ಕೋಡಿತಲೆ ಸ.ಹಿ. ಪ್ರಾ. ಶಾಲೆ ಕೋಡಿಬೆಂಗ್ರೆ, ಅ ಹಿ. ಪ್ರಾ. ಶಾಲೆ ಪಾಂಡೇಶ್ವರ, ವಿ. ಅ. ಹಿ. ಪ್ರಾ. ಶಾಲೆ ಎಡಬೆಟ್ಟು ಸಹಭಾಗಿತ್ವದಲ್ಲಿ ಹಂಗಾರಕಟ್ಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಇತ್ತೀಚಿಗೆ ಹಂಗಾರಕಟ್ಟೆ ದೂಳಂಗಡಿ ಶಾಲೆಯಲ್ಲಿ ಜರಗಿತು.ಕಾರ್ಯಕ್ರಮವನ್ನು ಬ್ರಹ್ಮಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಉದ್ಘಾಟಿಸಿ ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಗಾರಕಟ್ಟೆ ಶಾಲೆಯ ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷೆ ರೇಖಾ ಉಡುಪ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಪಾಂಡೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ ಬಿ. ರಾಘವೇಂದ್ರ, ಸದಸ್ಯೆ ಸುಜಾತ ವೆಂಕಟೇಶ್,ಐರೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಪೂಜಾರಿ, ಶೇಖರ್ ಪೂಜಾರಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ , ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ, ಪ್ರಮೀಳಾ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ್ ಕುಂದರ್, ಉದಯ್ ಕೋಟ, ಸಮೂಹ ಸಂಪನ್ಮೂಲ ವ್ಯಕ್ತಿ ಮಾಲಿನಿ ಸಾಲಿಗ್ರಾಮ, ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ ಅಂಪಾರು, ಬ್ರಹ್ಮಾವರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾವಂಜೆ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ್ ಗಾಣಿಗ, ಆತಿಥೇಯ ಶಾಲೆಗಳ ಮುಖ್ಯ ಶಿಕ್ಷಕರು, ಆತಿಥೇಯ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು, ನಿವೃತ್ತ ಮುಖ್ಯ ಶಿಕ್ಷಕಿ ಸೇಸು ಮತ್ತಿತರರು ಉಪಸ್ಥಿತರಿದ್ದರು.
ಕೋಡಿ ತಲೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರ್ ಸ್ವಾಗತಿಸಿದರು, ಕೋಡಿಬೆಂಗ್ರೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಕಲ್ಪನಾ ವಂದಿಸಿದರು.ಕಾರ್ಯಕ್ರಮವನ್ನು ಗೋಳಿಬೆಟ್ಟು ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಗಿಳಿಯಾರು ನಿರೂಪಿಸಿದರು.