ನವದೆಹಲಿ : ದೆಹಲಿ ಮದ್ಯ ನೀತಿ ಹಗರಣದಲ್ಲಿ ಜೈಲು ಸೇರಿದ್ದ ದೆಹಲಿ ಸಿಎಂ ಅರವಿಂದ ಕೇಜ್‌ವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜಾಮೀನು ಸಿಕ್ಕ ಬೆನ್ನಲ್ಲೇ ಸಂಜೆ ತಿಹಾರ್ ಜೈಲಿನಿಂದ ಹೊರಬಂದ ಕೇಜಿವಾಲ್, ಜೈಲುವಾಸದಿಂದ ನನ್ನ ಆತ್ಮಸ್ಥೆರ್ಯ 100 ಪಟ್ಟು ಹೆಚ್ಚಾಗಿದೆ ಎಂದರು. “ಸಿಎಂ ಕಚೇರಿಗೆ ತೆರಳಿ ಕಡತಗಳಿಗೆ ಸಹಿ ಹಾಕುವಂತಿಲ್ಲ ಬಹಿರಂಗ ಚುನಾವಣೆ ಪ್ರಚಾರಕ್ಕೆ ಹೋಗುವಂತಿಲ್ಲ, ಯಾವುದೇ ಸಾಕ್ಷಿಗಳ ಜತೆ ಮಾತನಾಡುವ ಹಾಗಿಲ್ಲ, ಅಗತ್ಯಬಿದ್ದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು, ಹಾಗೆಯೇ ಜಾಮೀನು ಅವಧಿಯಲ್ಲಿ ಮದ್ಯ ನೀತಿ ಹಗರಣದ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ’ ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ