ಕುಂದಾಪುರ. : ಕರ್ನಾಟಕ ಪ್ರಗತಿಪರ ಸೌಹಾರ್ದ ಸಹಕಾರಿ ಸಂಘ(ನಿ) ಕುಂದಾಪುರ ಇದರ ಮಹಾಸಭೆಯು ಶಾಸ್ತ್ರಿಪಾರ್ಕನ ವೈಶಾಲಿ ಕಾಂಪ್ಲೆಕ್ಸ್ ನ ಮಿನಿ ಹಾಲ್ ನಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಶ್ರೇಷ್ಠ ಸಹಾಕಾರಿ ಪ್ರಶಸ್ತಿ ಪುರಸ್ಕೃತರು ಸಮಾಜ ಸೇವಕರು ಆದ ಅಶೋಕ ಪೂಜಾರಿ ಬೀಜಾಡಿ ಇವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ಅಶೋಕ ಪೂಜಾರಿ ಮಾತನಾಡಿ ಸಂಸ್ಥೆಯು 3 ವರ್ಷದಲ್ಲಿ ಲಾಭವನ್ನು ಗಳಿಸಿದ್ದು ಗ್ರಾಹಕರ ನಂಬಿಕೆಯನ್ನು ಗಳಿಸಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದ್ದರು ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಪೂಜಾರಿ ಉಪಸ್ಥಿತರಿದ್ದರು ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಣಧಿಕಾರಿ ಅಶೋಕ ಪೂಜಾರಿ ಸ್ವಾಗತಿಸಿದರು ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಕೆ ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಮರ್ಪಿಸಿದ್ದರು.