Home » ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
 

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಜನತಾ ನ್ಯೂ ಇಂಗ್ಲೀಷ್ ಮೀಡಿಯo ಸ್ಕೂಲ್

by Kundapur Xpress
Spread the love

ಕಿರಿಮಂಜೇಶ್ವರ : ಕರ್ನಾಟಕ ಸರ್ಕಾರ ,ಶಾಲಾ ಶಿಕ್ಷಣ ಇಲಾಖೆ ಕೇಂದ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ,ಇವರ ಸಹಭಾಗಿತ್ವದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ,ಕಿರಿಮoಜೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ನ್ಯೂ ಇಂಗ್ಲೀಷ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ಒಟ್ಟು 31 ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಮ್ಮ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ 18 ಪ್ರಥಮ, 8 ದ್ವಿತೀಯ ಹಾಗೂ 5 ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ.

ಸಾಮೂಹಿಕ ವಿಭಾಗದ ಕವಾಲಿಯಲ್ಲಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಾದ ಅನೀಜ್, ಸಫಾನ್, ಅಮೀನ್, ಶೀಬನ್ , ನಿಜಾಮ್,ಅಶ್ರಫ್ ಇವರುಗಳು ಪ್ರಥಮ ಸ್ಥಾನವನ್ನು ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ವೈಯಕ್ತಿಕ ವಿಭಾಗದಲ್ಲಿ ಸಪ್ತಮಿ (ಕನ್ನಡ ಭಾಷಣ), ಮಿನಲ್ (ಇಂಗ್ಲೀಷ್ ಭಾಷಣ), ಸಹನಾ (ಹಿಂದಿ ಭಾಷಣ), ಪಂಚಮಿ (ಭರತನಾಟ್ಯ), ಪ್ರತೀಕ್ಷಾ (ಸಂಸ್ಕೃತ ಧಾರ್ಮಿಕ ಪಠಣ), ಪೌಝಾನ್ (ಅರೇಬಿಕ್ ಧಾರ್ಮಿಕ ಪಠಣ), ಭೂಮಿಕಾ (ಭಾವಗೀತೆ),ಪ್ರಣತ್ ಶೆಟ್ಟಿ (ಮಿಮಿಕ್ರಿ) ಋತು( ಚರ್ಚಾ ಸ್ಪರ್ಧೆ), ಭೂಮಿಕಾ (ರಂಗೋಲಿ), ಅಮೀನ್ ಸಿ ಹೆಚ್ ( ಗಝಲ್), ಅಪೇಕ್ಷಾ (ಆಶುಭಾಷಣ),ಸಮೃದ್ಧಿ (ಕವನ ವಾಚನ ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರೌಢಶಾಲಾ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ಪೂರ್ಣಿಮಾ (ಕನ್ನಡ ಪ್ರಬಂಧ ರಚನೆ), ಸಾಮೂಹಿಕ ವಿಭಾಗದಲ್ಲಿ ಸನ್ವಿತಾ ,ಅರ್ಚನಾ, ರಶ್ಮಿತಾ , ರಿಧಿ, ರಶ್ಮಿತಾ, ಐಶ್ವರ್ಯ (ಜಾನಪದ ನೃತ್ಯ), ಭೂಮಿಕಾ ಮತ್ತು ಸಪ್ತಮಿ (ರಸಪ್ರಶ್ನೆ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ.ಹಾಗೂ ವೈಯಕ್ತಿಕ ವಿಭಾಗದಲ್ಲಿ ಸಂಜನ (ಚಿತ್ರಕಲೆ) ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.ಹಿರಿಯ ಪ್ರಾಥಮಿಕ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ರಿನೋಲ (ಹಿಂದಿ ಕಂಠಪಾಠ), ಶ್ರೀಯಾ ಕೆ (ಸಂಸ್ಕೃತ ಧಾರ್ಮಿಕ ಪಠಣ),ಖುಷಿ (ಭಕ್ತಿ ಗೀತೆ),
ಉತ್ಸವಿ (ಕವನ ವಾಚನ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಮಹಮ್ಮದ್ ಯಾಸಿರ್ ( ಅರೇಬಿಕ್ ಧಾರ್ಮಿಕ ಪಠಣ), ನಮ್ಯ (ದೇಶಭಕ್ತಿ ಗೀತೆ), ಅಜಯಶ್ರೀ (ಚಿತ್ರಕಲೆ) ದ್ವಿತೀಯ ಸ್ಥಾನವನ್ನು ಹಾಗೂ ತನ್ವಿ (ಕಥೆ ಹೇಳುವುದು) ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.ಕಿರಿಯ ಪ್ರಾಥಮಿಕ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ಮಹಮ್ಮದ್ ರಫಾಝ್ (ಅರೇಬಿಕ್ ಧಾರ್ಮಿಕ ಪಠಣ), ಸಾನ್ವಿ ಆಚಾರ್ಯ (ಛದ್ಮವೇಷ) ದ್ವಿತೀಯ ಸ್ಥಾನವನ್ನು, ವೀಕ್ಷಿತಾ (ದೇಶಭಕ್ತಿ ಗೀತೆ), ಅಕ್ಷರ (ಭಕ್ತಿಗೀತೆ),ರಿಯೋನಾ (ಚಿತ್ರಕಲೆ) ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.ಜನತಾ ನ್ಯೂ ಇಂಗ್ಲೀಷ ಮೀಡಿಯಂ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ತರಬೇತಿಯನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ ,ಮುಖ್ಯ ಶಿಕ್ಷಕಿ ,ಬೋಧಕ ಮತ್ತು ಬೋಧಕೇತರ ವೃoದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

   

Related Articles

error: Content is protected !!