ಕಾಶ್ಮೀರ : ಜಮ್ಮು-ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ವಿಸ್ಮಯ ಮತ್ತು ವಿಶೇಷವೆಂಬಂತೆ, ಮೊತ್ತ ಮೊದಲ ಬಾರಿ ಶ್ರೀನಗರದಲ್ಲಿ ಅನಂತ ಚತುರ್ದಶಿಯಂದು ಶ್ರೀ ಮಹಾಗಣಪತಿ ದೇವರ ಶೋಭಾಯಾತ್ರೆ ನಡೆಯಿತು. ಸಾಂಪ್ರದಾಯಿಕ ಉಡುಗೆ ತೊಡುಗೆಗಳೊಂದಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು ಮತ್ತು ಚೆಂಡೆ-ವಾದ್ಯ, ಮ್ಯೂಸಿಕ್ ಬ್ಯಾಂಡ್ಗಳ ಲಯಕ್ಕನುಗುಣವಾಗಿ ನರ್ತಿಸುತ್ತಾ ದೇವರಿಗೆ ಜೈಕಾರ ಹಾಕಿದರು. ಮ್ಯೂಸಿಕ್ ಬ್ಯಾಂಡ್ಗಳು ಹಿನ್ನೆಲೆಯೊಂದಿಗೆ ಹರಿಸಿಂಗ್ ಹೈ ಸ್ಟ್ರೀಟ್ನಿಂದ ಹೊರಟ ಶ್ರೀ ದೇವರ ಶೋಭಾಯಾತ್ರೆ ಲಾಲ್ ಚೌಕ್ನ ಐತಿಹಾಸಿಕ ಕ್ಲಾಕ್ ಟವರ್ನಲ್ಲಿ ಸಮಾಪನಗೊಂಡಿತು. ಅಲ್ಲಿ ಹನುಮಾನ್ ಮಂದಿರ ಸಮೀಪದ ಝೀಲಂ ನದಿಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಧಿ ಬದ್ಧವಾಗಿ ಜಲಸ್ತಂಭನಗೊಳಿಸಲಾಯಿತು.ಕಳೆದ ಹಲವು ವರ್ಷಗಳ ಕಾಲ ಭಾರತದ ವಿಶಿಷ್ಟ ಹಬ್ಬ ಸಂಪ್ರದಾಯಗಳೆಲ್ಲವುಗಳಿಂದ ಪ್ರತ್ಯೇಕವಾಗಿ ಬಿಟ್ಟಿದ್ದ ಕಾಶ್ಮೀರದಲ್ಲಿ ವಿಘ್ನವಿನಾಶಕನ ಆರಾಧನೆ-ಶೋಭಾಯಾತ್ರೆಗೆ ಪ್ರೇರಣೆಯಾದದ್ದು ಮರಾಠಿ ಸಹೋದರರು. ದುಡಿಮೆಗಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ಬಂದಿರುವ ಮರಾಠಿ ಬಂಧುಗಳು ಈ ಬಾರಿ ವಿಘ್ನಹರನ ಆರಾಧನೆಯ ದಿಟ್ಟ ನಿರ್ಧಾರ ಕೈಗೊಂಡರು. ಬರೋಬ್ಬರಿ ಹತ್ತು ದಿನಗಳ ಕಾಲ ಸಂಭ್ರಮದಿಂದ ಪೂಜೆ -ಪ್ರಾರ್ಥನೆ ನೆರವೇರಿಸಿದ ಬಳಿಕ ಶೋಭಾಯಾತ್ರೆಗೆ ನಡೆಸಿದರು