ಕೋಟ : ಬಾಳ್ಕುದ್ರು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆಯು ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಘದ ಅಧ್ಯಕ್ಷ ಶ್ರೀಪತಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರಗಿತು.ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ ಲೆಕ್ಕಪತ್ರ ಮಂಡಿಸಿ ಅವಿಭಕ್ತ ದ. ಕ. ಜಿಲ್ಲಾ ಹಾಲು ಒಕ್ಕೂಟದ ಸಿಗುವ ಸವಲತ್ತುಗಳನ್ನು ವಿವರಿಸಿದರು. ಒಕ್ಕೂಟದಿಂದ ಪಶುವೈದ್ಯರಾದ ನಿಜಾಮ್ ಪಟೇಲರು ದನ ಸಾಕಾಣಿಕೆ ಮತ್ತು ವಿವಿಧ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.ಸಂಘದ ಲಾಭಾಂಶದಲ್ಲಿ 65 ಶೇಕಡಾ ಬೋನಸ್ ಹಾಗೂ 25 ಶೇಕಡಾ ಶೇರು ಡೆವಿಡೆಂಟ್ನ್ನು ಹಾಲು ಉತ್ಪಾದಕರಿಗೆ ನೀಡಲಾಯಿತು.ಈ ಸಂಧರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಪ್ರಥಮ ಹತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ಅಲ್ಲದೆ ಸಂಘದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ನಿರ್ದೇಶಕರುಗಳಾದ ಬಾಬುರಾಜೇಂದ್ರ ಐತಾಳ ,ಸೈಮನ್ ಡಿ ಆಲ್ಮೇಡಾ, ವಲೇರಿಯನ್ ಡಿಸೋಜ, ರೇಖಾ ಭಂಡಾರ್ತಿ , ಅನಂತಯ್ಯ ನಾಯಕ್, ಸಾವಿತ್ರಿ ಕುಂದರ್, ಗೋಪಾಲ ಗಾಣಿಗ, ಸಹಾಯಕಿ ಜಯಂತಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಾಗರತ್ನ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷೆ ನಾಗರತ್ನ ಗಾಣಿಗ ಸ್ವಾಗತಿಸಿದರು.ನಿರ್ದೇಶಕ ಜೈರಾಮ ಐತಾಳರು ವಂದಿಸಿದರು.