ಕುಂದಾಪುರ: ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ಕೋಟೇಶ್ವರದಲ್ಲಿ ನಡೆದಿದೆ. ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಗೌರೀಶ್ ಬಿ.ಆರ್. (25) ಮೃತಪಟ್ಟ ದುರ್ದೈವಿ. ಗೌರೀಶ ಬಿ.ಆರ್. ಎಂಬಿಬಿಎಸ್ ವಿದ್ಯಾಭ್ಯಾಸ ಮುಗಿಸಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಮನೆಯಲ್ಲಿದ್ದು ಬುಧವಾರ ಸಂಜೆ ಮನೆಯಿಂದ ಸಹನಾ ಹಾಲ್ ಹತ್ತಿರ ಇರುವ ಈಜು ಕೊಳದಲ್ಲಿ ಈಜಲು ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರಾತ್ರಿ ಗೌರೀಶ ಅವರ ಮೊಬೈಲ್, ಬ್ಯಾಗ್ ಹಾಗೂ ಚಪ್ಪಲಿ ಕೋಟೇಶ್ವರದ ಕೋಟೀಲಿಂಗೇಶ್ವರ ಕೆರೆಯ ಸಮೀಪ ಪತ್ತೆಯಾಗಿತ್ತು. ಗುರುವಾರ ಬೆಳಿಗ್ಗೆ ಕೋಟೇಶ್ವರ ಕೋಟೀಲಿಂಗೇಶ್ವರ ಕೆರೆಯಲ್ಲಿ ಗೌರೀಶ ಮೃತದೇಹ ಪತ್ತೆಯಾಗಿದೆ.
ಯಾವುದೋ ಕಾರಣಕ್ಕೆ ಕೋಟೇಶ್ವರ ಕೋಟೀಲಿಂಗೇಶ್ವರ ಕೆರೆಯ ಬಳಿ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.