Home » ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಉಪನ್ಯಾಸಕರ ಸಮ್ಮೇಳನ
 

ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಉಪನ್ಯಾಸಕರ ಸಮ್ಮೇಳನ

by Kundapur Xpress
Spread the love

ಕುಂದಾಪುರ : ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಕಾಲೇಜುಗಳ ಉಪನ್ಯಾಸಕರ ಸಮ್ಮೇಳನ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಡಾ.ಟಿ.ಎಮ್.ಎ.ಪೈ ಅವರಿಗೆ ಪುಷ್ಪ ನಮನ ಕಾರ್ಯಕ್ರಮ ನಡೆಯಲಿದೆ. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇದರ ತಂತ್ರಜ್ಞಾನ ಮತ್ತು ವಿಜ್ಞಾನ ಇದರ ಪ್ರೊ ಚಾನ್ಸಲರ್ ಡಾ.ನಾರಾಯಣ ಸಭಾಹಿತ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಧ್ಯಕ್ಷ ಮತ್ತು ಮಾಹೆ ಪ್ರೊ ಚಾನ್ಸಲರ್ ಡಾ.ಹೆಚ್.ಎಸ್.ಬಲ್ಲಾಳ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ ಇದರ ಸಿ.ಒ.ಒ ಡಾ.ರವಿರಾಜ್ ಎನ್.ಎಸ್. , ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿ ವರದರಾಯ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಎಮ್.ಎಸ್.ಎಲ್.ಎಸ್ ಮುಖ್ಯಸ್ಥೆ ಡಾ.ಶಮಾ ಪ್ರಸಾದ್ ಕೆ. ಇವರು “ಎಜಿಇ ಕಾಲೇಜುಗಳಲ್ಲಿ ಸಂಶೋಧನೆಗೆ ಉತ್ತೇಜನ” ಕುರಿತು ಮಾತನಾಡಲಿದ್ದಾರೆ. ಮಣಿಪಾಲದ ಎಮ್.ಸಿ.ಒ.ಪಿ.ಎಸ್ ನ ಔಷಧ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಶ್ರೀಧರ ಆರ್.ಪೈ “ಎಜಿಇ ಕಾಲೇಜುಗಳಲ್ಲಿ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯ ಚೌಕಟ್ಟು” ಕುರಿತು ಮಾತನಾಡಲಿದ್ದಾರೆ.
“ಎಜಿಇ ಪದವಿ ಕಾಲೇಜುಗಳಿಗೆ ಮಾಹೆಯಲ್ಲಿ ಸ್ನಾತಕೋತ್ತರ ಅಧ್ಯಯನದ ಅವಕಾಶಗಳು” ಕುರಿತು ಮಾಹೆಯ ಮಾರ್ಕೆಟಿಂಗ್ ವಿಭಾಗದ ಉಪನಿರ್ದೇಶಕರಾದ ಶ್ರೀನಿಧಿ ಕಾಮತ್ ಮಾತನಾಡಲಿದ್ದಾರೆ. “ಸೈಬರ್ ಸೆಕ್ಯೂರಿಟಿ ಜಾಗೃತಿ” ಕುರಿತು ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಅನಂತ ಪ್ರಭು ಮಾತನಾಡಲಿದ್ದಾರೆ.

   

Related Articles

error: Content is protected !!