ಇಂದು ರಿಪೋರ್ಟ್ ಕಾರ್ಡ್ ಬಿಡುಗಡೆ
ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಸಚಿವ ಸುನೀಲ್ ಕುಮಾರ್ ಇಂದು ರಿಪೋರ್ಟ್ ಕಾರ್ಡ್ ಬಿಡುಗಡೆಗೊಳಿಸಲಿದ್ದಾರೆ. ಇಂದು ಕುಕ್ಕುಂದೂರು ಗ್ರಾ.ಪಂ. ಮೈದಾನದಲ್ಲಿ ಸಂಜೆ 4 ಗಂಟೆಗೆ ರಿಪೋರ್ಟ್ ಕಾರ್ಡ್ ಅನ್ನು ಸುನೀಲ್ ಕುಮಾರ್ ಅವರು ಮತದಾರರಿಗೆ ನೀಡಲಿದ್ದಾರೆ.
ಮೂರು ಅವಧಿಗೆ ಕ್ಷೇತ್ರದ ಶಾಸಕನಾಗಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತೇನೆ. ಒಬ್ಬ ಜನಪ್ರತಿನಿಧಿಯಾಗಿ ಕ್ಷೇತ್ರಕ್ಕಾಗಿ ಏನು ಮಾಡಿದ್ದೇನೆ ಎಂಬುದನ್ನು ಜನತೆಗೆ ತಿಳಿಯಪಡಿಸುವುದು ಕರ್ತವ್ಯ. ನನ್ನ ಈ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಗರಿಷ್ಟ ಮಟ್ಟದಲ್ಲಿ ಮಾಡಿದ ತೃಪ್ತಿ ನನಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕಾರ್ಕಳ ಕ್ಷೇತ್ರದಲ್ಲಿ ಶಾಸಕನಾದ ಅವಧಿಯಲ್ಲಿ ಆರೋಗ್ಯ, ಶಿಕ್ಷಣ, ನೀರಾವರಿ, ಮೂಲಭೂತ ಸೌಕರ್ಯಗಳನ್ನು ಸೇರಿಸಿ ಸಾಂಸ್ಕøತಿಕ, ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರ, ಹೀಗೆ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಅಭಿವೃದ್ಧಿಯನ್ನು ಮಾಡಿರುವ ಸಂತೃಪ್ತಿ ನನಗಿದೆ. ಇದನ್ನು ನಾನು ನನ್ನನ್ನು ಆಯ್ಕೆ ಮಾಡಿರುವ ಜನತೆಗೆ ತಿಳಿಯಪಡಿಸುವುದು ನನ್ನ ಆದ್ಯ ಕರ್ತವ್ಯವೂ ಹೌದು ಎಂದಿದ್ದಾರೆ.
2018 ರ ಒಂದು ವರ್ಷ ವಿರೋಧ ಪಕ್ಷದ ಶಾಸಕನಾಗಿ ಇನ್ನೆರಡು ವರ್ಷ ಆಡಳಿತ ಪಕ್ಷದ ಶಾಸಕನಾಗಿ ಕಳೆದ ಎರಡು ವರ್ಷಗಳಿಂದ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಸಚಿವನಾಗಿ ಕಾರ್ಕಳ ಕ್ಷೇತ್ರಕ್ಕೆ ಏನೆಲ್ಲಾ ಕೆಲಸ ಕಾರ್ಯಗಳು ಆಗಿರುವುದರ ಬಗ್ಗೆ ಸಂಪೂರ್ಣ ಚಿತ್ರಣ ಈ ರಿಪೋರ್ಟ್ ಕಾರ್ಡ್‍ನಲ್ಲಿರುತ್ತದೆ. ಇದನ್ನು ಕ್ಷೇತ್ರದ ಜನರನ್ನು ಕರೆದು ನೀಡಬೇಕೆಂಬ ಮಹದಾಸೆ ನನ್ನದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನೊಂದಿಗೆ ಕೈಜೋಡಿಸುವಂತೆ ಹಾಗೂ ಆಶೀರ್ವದಿಸುವಂತೆ ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ