Home » 35.ವೈರಾಗ್ಯವೇ ಪ್ರಧಾನ
 

35.ವೈರಾಗ್ಯವೇ ಪ್ರಧಾನ

by Kundapur Xpress
Spread the love

 

  1. ವೈರಾಗ್ಯವೇ ಪ್ರಧಾನ

ಮನಸ್ಸನ್ನು ನಿಶ್ಚಲಗೊಳಿಸುವುದು ಅತ್ಯಂತ ಕಷ್ಟದ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಮನಸ್ಸೆಂಬುದು ಸ್ಮøತಿಯ ಬಹಳ ದೊಡ್ಡ ಸಂಗ್ರಾಹಕ. ಅದರೊಳಗಿನ ಸ್ಥಳಾವಕಾಶದ ಬಗ್ಗೆ ಯಾರಿಗೂ ಸ್ಪಷ್ಟವಾದ ಅರಿವಿಲ್ಲ. ಸ್ಮøತಿ ಎಂದರೆ ಕೇವಲ ಆಗಿ ಹೋದ ಘಟನೆಗಳ ವಿವರಗಳಲ್ಲ. ಪೂರ್ವಜನ್ಮದ ಸ್ಮøತಿಗಳೂ ಅದರಲಿ ಅಡಕವಾಗಿರಬಹುದು. ಮನಸ್ಸು ತನಗೆ ಇಷ್ಟ ಬಂದಾಗಲೆಲ್ಲ ಅದರ ಪುನರವಲೋಕನ ಮಾಡುತ್ತಲೇ ಇರುತ್ತದೆ. ಮಾತ್ರವಲ್ಲ ಇದರ ಆಧಾರದಲ್ಲೇ ಅದು ಮುಂದೆ ಸಂಭವಿಸಬೇಕೆಂದು ಬಯಸುವ ಅನುಕೂಲಕರ ಸಂಗತಿಗಳನ್ನೂ ಚಿತ್ರಸಿಕೊಳ್ಳುತ್ತಲೇ ಇರುತ್ತದೆ. ಎಷ್ಟೋ ವೇಳೆ ನಾವಿದನ್ನುಮನಸ್ಸಿನ ಮಂಡಿಗೆ ಮೆಲ್ಲುವುದು ಅಥವಾಹಗಲುಗನಸು ಕಾಣುವುದು ಎಂದು ಹೇಳುವುದುಂಟು. ಇಷ್ಟೊಂದು ಕ್ರಿಯಾಶೀಲವಾಗಿರುವ ಮನಸ್ಸನ್ನುನಿಶ್ಚಲ ಗೊಳಿಸುವುದು ನಮ್ಮಿಂದ ಸಾದ್ಯವೇ? ಗೀತೆಯಲ್ಲಿ ಅರ್ಜುನನಿಗೂ ಎದುರಾಗುವ ಪ್ರಶ್ನೆ ಇದೇಇಷ್ಟೊಂದು ಚಂಚಲವಾಗಿರುವ ಮನಸ್ಸನ್ನು ನಿಯಂತ್ರಿಸುವುದೂ ಒಂದೇ, ಗಾಳಿಯನ್ನು ಕಟ್ಟಿ ಹಾಕುವುದೂ ಒಂದೇ. ಹಾಗಿರುವಾಗ ಮನಸ್ಸಿನ ಮೇಲೆ ಪ್ರಭುತ್ವ ಸ್ಥಾಪಿಸುವುದಾದರೂ ಹೇಗೆ ಎಂದಾತ ಕೃಷ್ಣನನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಕೃಷ್ಣ ಹೇಳುತ್ತಾನೆ. ಮನಸ್ಸನ್ನು ನಿಯಂತ್ರಿಸುವುದು ಸುಲಭದ ಕೆಲಸವೇನೂ ಅಲ್ಲ. ಆದರೆ ಪ್ರಯತ್ನಪೂರ್ವಕವಾಗಿವೈರಾಗ್ಯವನ್ನು ತಳೆಯುವ ಮೂಲಕವೇ ನೀನದನ್ನು ಸಾಧಿಸಬಹುದು. ಪ್ರಯತ್ನವನ್ನು ಪದೇ ಪದೇ ಮಾಡಬೇಕು. ಕರ್ಮಫಲದಲ್ಲಿ ನಿರಾಸಕ್ತಿಯನ್ನು ಹೊಂದುವ ಮೂಲಕವೇ ವೈರಾಗ್ಯ ಪ್ರಾಪ್ತಿ ಸಾಧ್ಯಾವಾಗುವುದು.

   

Related Articles

error: Content is protected !!