Home » ಕಾಳಿಂಗ ನಾವಡ ಪ್ರಶಸ್ತಿ
 

ಕಾಳಿಂಗ ನಾವಡ ಪ್ರಶಸ್ತಿ

ಚಂಡೆಯ ಗಂಡುಗಲಿ ಕೋಟ ಶಿವಾನಂದ

by Kundapur Xpress
Spread the love

ಕೋಟ : ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕಾಳಿಂಗ ನಾವಡರ ನೆನಪಿನಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಾಂಸ್ಕೃತಿಕ ಸಂಸ್ಥೆಯಾದ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ.ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ.

ಗುಂಡ್ಮಿ ಸದಾನಂದ ಐತಾಳ್,ಸುಬ್ರಹ್ಮಣ್ಯ ಧಾರೇಶ್ವರ್,ಕೆಪ್ಪೆಕೆರೆ ಸುಬ್ರಾಯ ಹೆಗಡೆ,ಎಳ್ಳಾರೆ ವೆಂಕಟ್ರಾಯ ನಾಯಕ್,ನೆಬ್ಬೂರು ನಾರಾಯಣ ಹೆಗಡೆ,ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ,ಶಂಕರ ಭಾಗವತ ಯಲ್ಲಾಪುರ,ಬಿದ್ಕಲ್‍ಕಟ್ಟೆ ಕೃಷ್ಣಯ್ಯ ಆಚಾರ್ಯಹಾಗೂ ಸುರೇಶ್ ರಾವ್ ಬಾರ್ಕೂರ್ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು ಸುಮಾರು 46 ವರ್ಷಗಳಿಂದ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತರಾದ ಕೋಟ ಶಿವಾನಂದರವರಿಗೆ ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಸಭಾಂಗಣದ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

   

Related Articles

error: Content is protected !!