ತಿರುಮಲ : ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಿದ್ಧ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ವೆಂಕ ಟೇಶ್ವರ ದೇಗುಲದ ಸಮುಚ್ಚಯವನ್ನು ಧಾರ್ಮಿಕವಾಗಿ ಶುದ್ದೀಕರಣ ಸಂಪನ್ನಗೊಂಡಿದೆ. ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ 8 ಅರ್ಚಕರು, 3 ಆಗಮ ಸಲಹೆಗಾರರ ನೇತೃತ್ವದಲ್ಲಿ ಬೆಳಗ್ಗೆ 6.00 ಗಂಟೆಯಿಂದ 10.00 ಗಂಟೆಗಳ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಲಡ್ಡು ತಯಾರಿಸುವ ಕೊಠಡಿ, ಪ್ರಸಾದ ತಯಾರಿಸುವ ಕೊಠಡಿಗಳಲ್ಲಿ ಮಹಾಶಾಂತಿಹೋಮ ನಡೆಸಲಾಯಿತು. ಬಳಿಕ ಪಂಚಗವ್ಯವನ್ನು ಲಡ್ಡು ತಯಾರಿ, ಪ್ರಸಾದ ತಯಾರಿ ಕೊಠಡಿ ಮತ್ತು ದೇಗುಲದ ಸಮುಚ್ಚಯಗಳಲ್ಲಿ ಪ್ರೋಕ್ಷಣೆ ಮಾಡುವ ಮೂಲಕ ಅದನ್ನು ಶುದ್ದೀಕರಿಸಲಾಯಿತು
ಇಡೀ ದೇಗುಲ ಪವಿತ್ರವಾಗಿದೆ
ತಪ್ಪನ್ನು ಸರಿಪಡಿಸಿಕೊಂಡು ದೇಗುಲದ ಪ್ರಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ದೇಗುಲ ಪವಿತ್ರವಾಗಿದೆ’ ಎಂದು ಎಂದು ಮುಖ್ಯ ಅರ್ಚಕ ವೇಣುಗೋಪಾಲ ದೀಕ್ಷಿತುಲು ಘೋಷಿಸಿದ್ದಾರೆ