Home » ಎಂ ಐ ಟಿ ಕುಂದಾಪುರದಲ್ಲಿ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ
 

ಎಂ ಐ ಟಿ ಕುಂದಾಪುರದಲ್ಲಿ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ

by Kundapur Xpress
Spread the love

ಮೂಡ್ಲಕಟ್ಟೆ : ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವನ್ನು ಇತ್ತೀಚೆಗೆ ಎಂ.ಐ.ಟಿ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಆಗಮಿಸಿದ ನೀವಿಯಸ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್ನನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆದ ಶ್ರೀಯುತ ಸುಯೋಗ್ ಶೆಟ್ಟಿ ಇವರು ಪ್ರಥಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ” ತಾಂತ್ರಿಕ ತರಬೇತಿಯ ಬಗ್ಗೆ  ಕುತೂಹಲ ಇರಬೇಕು, ವಿದ್ಯಾರ್ಥಿ ಜೀವನದಲ್ಲಿ ಎದುರಿಸಬೇಕಾದ ಸವಾಲುಗಳನ್ನು ಹಾಗೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಮುಂದಿನ ನಾಲ್ಕು ವರ್ಷ ಕಲಿಕೆಯಲು ಗಮನ ಹರಿಸಬೇಕೆಂದು ಕರೆಕೊಟ್ಟರು.

ಗೌರವ ಅತಿಥಿಗಳಾಗಿ ಆಗಮಿಸಿದ ಆಸ್ಪೈರ್ ಆಟೋಮೇಷನ್ ನ ವ್ಯವಸ್ಥಾಪಕ ಪಾಲುದಾರಗಿರುವ ಶ್ರೀಯುತ ಸಂತೋಷ್ ಸಿರಿಯಾನ್ ಇವರು  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಸ್ತು, ಕಠಿಣ ಪರಿಶ್ರಮ, ಹೊಸ ವಿಷಯದ ಬಗ್ಗೆ ಅವಿಷ್ಕಾರ , ಸಂವಹನ ದ ಅಗತ್ಯತೆಗಳನ್ನು  ತಿಳಿಸಿದರು.ಕಾಲೇಜಿನ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ| ರಾಮಕೃಷ್ಣ ಹೆಗ್ಡೆ ಅವರು , ವಿದ್ಯಾರ್ಥಿಗಳ ಪೋಷಕರನ್ನು  ಉದ್ದೇಶಿಸಿ,  ವಿಧ್ಯಾರ್ಥಿಗಳ ಹಾಜರಾತಿಯಲ್ಲಿ ಪೋಷಕರ ಜವಾಬ್ದಾರಿಯನ್ನು ತಿಳಿಸಿದರು.ಉಪ ಪ್ರಾಂಶುಪಾಲ ಪ್ರೊಫ಼ೆಸರ್ ಮೇಲ್ವಿನ್ ಡಿಸೋಜಾ ಮಾತನಾಡಿ ವಿಧ್ಯಾರ್ಥಿಗಳು ಪ್ರಥಮ ವರ್ಷದಿಂದಲೇ ಪ್ಲೇಸ್ಮೆಂಟ್ ತಯಾರಿ ನಡಸಬೇಕೆಂದರು.

ರ್ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷೀಯ  ಮಾತುಗಳನ್ನು ಆಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ಅವರು, ಪ್ರಥಮ ವರ್ಷದ ವಿದ್ಯಾರ್ಥಿಗಳ ಪೋಷಕರಿಗೆ ತಮ್ಮ ಸಂಸ್ಥೆಯನ್ನು ಶಿಕ್ಷಣಕ್ಕಾಗಿ ಆಯ್ಕೆ ಮಾಡಿದಕ್ಕಾಗಿ ಅಭಿನಂದನೆಯನ್ನು ಸಲ್ಲಿಸಿದರು, ವಿದ್ಯಾರ್ಥಿಗಳೊಂದಿಗೆ ಸ್ಪೂರ್ತಿದಾಯಕವಾದ ಮಾತುಗಳನ್ನಾಡಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಪ್ಲೇಸ್ಮೆಂಟ್ ಡೀನ್ ಆಗಿರುವ ಪ್ರೊಫೆಸರ್ ಅಮೃತಮಾಲ  ಹಾಗೂ ಎಲ್ಲಾ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅತಿಥಿಗಳನ್ನು ಕಾಲೇಜಿನ ಉಪನ್ಯಾಸಕರುಗಳಾದ ಪ್ರೊಫ಼ೆಸರ್ ಶ್ರೀನಿಧಿ ಹಾಗೂ ಪ್ರೊಫ಼ೆಸರ್ ಫರಾನ ಇವರು ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿನಿಯರಾದ ಕುಮಾರಿ ವೈಷ್ಣವಿ ಮತ್ತು ಕುಮಾರಿ ರುಚಿತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿ  ಮೇಘನ ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿನಿ  ಫಾತಿಮಾ ತಹಸೀರ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ವಿದ್ಯಾರ್ಥಿನಿ ವಿನೀತ ಧನ್ಯವಾದ ಸಮರ್ಪಿಸಿದರು.

   

Related Articles

error: Content is protected !!