ಕುಂದಾಪುರ : ಕರ್ನಾಟಕ ಸರ್ಕಾರ,ಶಾಲಾ ಶಿಕ್ಷಣ ಇಲಾಖೆ ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಇವರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಹೆಸ್ಕುತ್ತೂರಿನಲ್ಲಿ ನಡೆದ ಹುಣ್ಸೆಮಕ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎಕ್ಸಲೆಂಟ್ ಕಾಲೇಜು ಹಾಗೂ ಹೈಸ್ಕೂಲ್ ಸಮಗ್ರ 31 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.ವೈಯಕ್ತಿಕ ಹಾಗೂ ಸಾಮೂಹಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ ವಿದ್ಯಾರ್ಥಿಗಳು 12 ಪ್ರಥಮ, 11ದ್ವಿತೀಯ, 8 ತೃತೀಯ ಸ್ಥಾನದಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.ಪ್ರಥಮ ಸ್ಥಾನಗಳಿಸಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ತಮ್ಮ ಅರ್ಹತೆಯನ್ನು ಗಳಿಸಿಕೊಂಡಿದ್ದಾರೆ
ಸಾಮೂಹಿಕ ವಿಭಾಗದ ಜಾನಪದ ನೃತ್ಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ವೈಭವ್ ಶೆಟ್ಟಿ, ಲಿಖಿತ್ ,ಹರ್ಷ ಹೆಚ್.ವಿ, ಪ್ರಥಮ್, ನಂದಕುಮರ್ ,ಅಮಿತ್ ಜಾದವ್, ಕಾರ್ತಿಕ್ ಬಿ.ಎಮ್, ಅಕ್ಷನ್, ಮಂದಾರ, ಅನಘ್, ಅನುಪ್, ಸಾತ್ವಿಕ್ ಪ್ರಥವi ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಶ್ರೇಯಾ ಆಚಾರ್ (ಭರತನಾಟ್ಯ), ಸಿಂಚನಾ (ಕವನ/ಪದ್ಯವಾಚನ), ವೈಷ್ಣವಿ (ಕನ್ನಡ ಭಾಷಣ), ಸನ್ವಿ(ಸಂಸ್ಕøತ ಭಾಷಣ), ಸಾನ್ವಿ(ಹಿಂದಿ ಭಾಷಣ), ವಿಧಾತ್ರಿ ವೈದ್ಯ (ಭಾವಗೀತೆ), ಆಶಿಕ್(ಕನ್ನಡ ಆಶುಭಾಷಣ),ಸುಶಾಂತ್ ಚಂದ್ರ ಹಾಗೂ ಮಯೂರ್ (ರಸಪ್ರಶ್ನೆ), ಅನನ್ಯ ಶೆಟ್ಟಿ (ಚಿತ್ರಕಲೆ ಮತ್ತು ರಂಗೋಲಿ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ತಾಲೂಕು ಮಟ್ಟಕ್ಕೆ ತೇರ್ಗಡೆಗೊಂಡಿದ್ದಾರೆ.
ಸಾಮೂಹಿಕ ವಿಭಾಗದ ಕವ್ವಾಲಿಯಲ್ಲಿ ಅಭಿನಂದನ್ ,ಶಾಹ್ಲಾ, ಆಯಿಷಾ, ಮೊಹಮ್ಮದ್ ಅನ್ನಾಸ್, ಮೊಹಮ್ಮದ್ ರೆಹಾನ್, ಶ್ರೀರಕ್ಷಾ ತಂಡದವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ವೈಯಕ್ತಿಕ ವಿಭಾಗದಲ್ಲಿ ಅಭಿನಂದನ್(ಚರ್ಚಾಸ್ಪರ್ಧೆ), ಸ್ಫೂರ್ತಿ(ಜಾನಪದ ಗೀತೆ), ಸಮೇಕ್ಷ(ಇಂಗ್ಲೀಷ್ ಭಾಷಣ),ಶರಣ್ಯ(ಗಝಲ್), ಧನುಷ್(ಪ್ರಬಂಧ) ಸ್ಪರ್ಧೆಗಳಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಗಳಿಸಿಕೊಂಡಿರುತ್ತಾರೆ.ಹೈಸ್ಕೂಲ್ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ರಹೀಫ್(ಅರೇಬಿಕ್ ಧಾರ್ಮಿಕ ಪಠಣ), ಧನ್ವಿತಾ(ರಂಗೋಲಿ),ವೈಭವಿ(ಆಶುಭಾಷಣ), ಆದಿತ್ಯ ಹಾಗೂ ಕವನ(ರಸಪ್ರಶ್ನೆ) ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಅಮೃತ(ಚಿತ್ರಕಲೆ), ಸಾತ್ವಿಕ್(ಸಂಸ್ಕøತ ಧಾರ್ಮಿಕ ಪಠಣ), ಅಕ್ಷರ(ಜಾನಪದ ಗೀತೆ), ತನುಶ್ರೀ(ಭರತನಾಟ್ಯ),
ದಿವಿಜ(ಮಿಮಿಕ್ರಿ), ಶ್ರಾವ್ಯ (ಕನ್ನಡಭಾಷಣ/ಇಂಗ್ಲಿಷ್ ಭಾಷಣ), ದಕ್ಷ(ಕವನ/ಪದ್ಯವಾಚನ) ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.ವಿದ್ಯಾರ್ಥಿಗಳ ಸಾಧನೆಗೆ ಎಕ್ಸಲೆಂಟ್ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು,ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿ ಬಳಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.