Home » ಮೀನು ಮಾರುಕಟ್ಟೆಗೆ ಲೋಕಾಯುಕ್ತ ತನಿಖಾಧಿಕಾರಿ ಭೇಟಿ ಪರಿಶೀಲನೆ
 

ಮೀನು ಮಾರುಕಟ್ಟೆಗೆ ಲೋಕಾಯುಕ್ತ ತನಿಖಾಧಿಕಾರಿ ಭೇಟಿ ಪರಿಶೀಲನೆ

by Kundapur Xpress
Spread the love

ಕೋಟ : ಇಲ್ಲಿನ ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಸಾಸ್ತಾನ ಮೀನುಮಾರುಕಟ್ಟೆ ಕಳಪೆ ಕಾಮಗಾರಿ ದೂರಿನ್ವಯ ಪರಿಶೀಲನೆಗಾಗಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.ಮೀನುಗಾರಿಕಾ ಇಲಾಖೆ ಮೂಲಕ ಎನ್‍ಎಫ್‍ಡಿವಿ ಹೈದರಾಬಾದ್,ನಬಾರ್ಡ್‌ ಇವರ ಅನುದಾನದಡಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಮೀನುಮಾರುಕಟ್ಟೆ ಕಾಮಗಾರಿಯಲ್ಲಿ ಲೋಪವೆಸಗಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಥೋಮಸ್ ರೂಡ್ರಿಗಸ್ ದೂರಿನ ಅನ್ವಯ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇದರ ಐ.ಓ ಶುಭ.ಟಿ ವಿವಿಧ ಇಲಾಖೆಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಿದರು.ಸಮಾರು 3.00 ಗಂಟೆಯವರೆಗೆ ಮೀನುಮಾರುಕಟ್ಟೆಯ ವಿವಿಧ ಭಾಗಗಳ ಕಟ್ಟಡಗಳ ಹಾಗೂ ಅಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿದ ಅವರು ಸಂಬಂಧಿಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಪಂಚಾಯತ್ ಅಭಿವೃದ್ಧಿಯನ್ನು ತರಾಟೆ ತೆಗೆದುಕೊಂಡರು.ಪ್ರಸ್ತುತ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಥೋಮಸ್ ರೂಡ್ರಿಗಸ್ ರವರು ಲೋಕಾಯುಕ್ತ ಅಧಿಕಾರಿಗಳಿಗೆ ಮನದಟ್ಟು ಮಾಡಿ ಕಟ್ಟಡ ಕಾಮಗಾರಿಯಲ್ಲಿ ಕಳಪೆ,ಅಲ್ಲಿನ ನಿರುಪಕ್ತ ನೀರು ಹೋಗುವ ಕಾಲುವೆ,ಟಾಯ್ಲೆಟ್ ಸೇರಿದಂತೆ ವಿವಿಧ ಅಂಗಡಿ ಕೋಣೆಗಳ ಕಾಮಗಾರಿಗಳ ಹಾಗೂ ನಿರ್ವಹಣೆಯ ರೀತಿಯನ್ನು ಮನದಟ್ಟು ಮಾಡಿದರು.

ತರಾಟೆ ತೆಗೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಸಾಸ್ತಾನ ಮೀನುಮಾರುಕಟ್ಟೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ ಆದರೆ ಇಲ್ಲಿನ ಅವ್ಯವಸ್ಥೆಗಳ ಹಾಗೂ ನಿರ್ವಹಣೆ ಬಗ್ಗೆ ಪಂಚಾಯತ್ ಪಿಡಿಓ ಅನ್ನು ಪ್ರಶ್ನಿಸಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹಾಗೂ ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಮಹಿಳಾ ಮೀನುಗಾರರ ಅಳಲು :

ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದ್ದಂತೆ ಅಲ್ಲಿನ ಪ್ರಸ್ತುತ ಮಹಿಳಾ ಮೀನುಗಾರರು ತಮ್ಮ ಅಳಲನ್ನು ತೊಡಿಕೊಂಡ 19 ಒಣ ಮೀನು ಮಾರಾಟ ಮಳಿಗಳನ್ನು ಅವರಿಗೆ ನೀಡುವ ಬದಲು ಗ್ರಾಮಪಂಚಾಯತ್‍ನವರು ಏಲಂ ಮೂಲಕ ಖಾಸಗಿ ವ್ಯಾಪಾರಸ್ಥರಿಗೆ ಅಕ್ರಮವಾಗಿ ನೀಡಿದ್ದಾರೆ ಎಂದು ಒಣ ಮೀನುಮಾರಾಟಗಾರ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಲ್ಲದೆ ಪ್ರಸ್ತುತ ಸ್ಥಳ ಗ್ರಾಮಪಂಚಾಯತ್ ಮೀನುಗಾರಿಕಾ ಇಲಾಖೆಗೆ ದಾನ ಪತ್ರದ ಮೂಲಕ ನೀಡಿದೆ ಅಲ್ಲದೆ 2ಕೋಟಿ ರೂ ಅನುದಾನವು ಮೀನು ಮಾರಾಟಕ್ಕಾಗಿಯೇ ನೀಡಿದ್ದು ಈ ಕಟ್ಟಡವು ನಮ್ಮಗೆ ಸೇರಿದರೂ ನಮಗೆ ನೀಡಿಲ್ಲ,ಕಟ್ಟಡದ ನೀಲನಕ್ಷೆಯಲ್ಲಿ 200 ಮಹಿಳಾ ಮಾರಾಟಗಾರರು ಕೂರುವ ವ್ಯವಸ್ಥೆ ತೊರಿಸಲಾಗಿದ್ದು ಇಲ್ಲಿ ಪ್ರಸ್ತುತ 64 ಜನ ಮಾರಾಟಗಾರರು ಕುಳಿತುಕೊಳ್ಳಲು ಯೋಗ್ಯವಾಗಿದೆ.ಅಲ್ಲದೆ ಅಸಮರ್ಪಕ ಕಾಮಗಾರಿಯಿಂದ ಮಾರುಕಟ್ಟೆಯ ಪ್ರತಿ ವ್ಯವಸ್ಥೆಯು ಅವ್ಯವಸ್ಥೆಗೆ ಆಗರವಾಗಿದೆ.ನಮ್ಮಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದರು.ಕೊಳತು ನಾರುವ ಡ್ರೈನೆಜ್,ಟ್ಯಾಂಕ್,ಟಾಯ್ಲೆಟ್ ವಿಕ್ಷೀಸಿದ ಅಧಿಕಾರಿ ಖೇಧ
ಇಲ್ಲಿನ ಮಾರುಕಟ್ಟೆಯ ಹಿಂಭಾಗದಲ್ಲಿರುವ ಮೀನಿನ ನಿರುಪಯುಕ್ತ ನೀರಿನ ಟ್ಯಾಂಕ್ ತೆರೆಯುತ್ತಿದ್ದಂತೆ ಗಬ್ಬು ನಾರುವ ಸ್ಥಿತಿ ಕಂಡು ಅಧಿಕಾರಿಗಳು ಖೇದ ವ್ಯಕ್ತಪಡಿಸಿ ಈ ರೀತಿಯ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ವಿರುದ್ಧ ಬೇಸರ ಹೊರಹಾಕಿ ಲೋಪಗಳ ಪಟ್ಟಿಮಾಡಿಕೊಂಡರು.

ನಾವು ಸುಂಕ ನೀಡಲ್ಲ :

ಮೀನುಮಾರುಕಟ್ಟೆಯಲ್ಲಿ ಐರೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ಮಹಿಳಾ ಮೀನುಗಾರರು ಪ್ರಸ್ತುತ ಸಮಸ್ಯೆಗಳ ಬಗ್ಗೆ ಮನವೆರಿಕೆ ಮಾಡಿ ನಮ್ಮಗೆ ಮಾರುಕಟ್ಟೆಯಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸಿ ಇಲ್ಲವಾದಲ್ಲಿ ಸುಂಕ ನೀಡುವುದಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಈವೇಳೆ ಅಭಿವೃದ್ಧಿ ಅಧಿಕಾರಿ ಮಾತನಾಡಿ ನಾವೇನು ಪಂಚಾಯತ್ ಪ್ರತಿನಿಧಿಗಳಲ್ಲ ಬದಲಾಗಿ ನಾನು ಬರುವುದಕ್ಕಿಂತ ಹಿಂದೆಯೇ ಈ ನಿಯಮಮಾಡಲಾಗಿದೆ ಪ್ರಸ್ತುತ ಸುಂಕ ಕಟ್ಟಲೇ ಬೇಕು ಎಂದರು ಈ ಬಗ್ಗೆ ಮಹಿಳಾ ಮೀನುಗಾರರು ಸುಂಕ ಕಟ್ಟಲ್ಲ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್, ಕೆಎಫ್‍ಡಿಸಿ ಮಂಗಳೂರು ಇದರ ಸಿನಿಯರ್ ಮ್ಯಾನೇಜರ್ ಮಲ್ಲೇಶ್ ,ಪ್ರಾಜೆಕ್ಟ್ ಇಂಜಿನಿಯರ್ ಮನೋಹರ್,ಲೋಕೋಪಯೋಗಿ ಪರಿಶೀಲನಾ ಇಂಜಿನಿಯರ್ ಸಮ್ರಾಟ್ ಗೌಡ,ಐರೋಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಸೇರಿದಂತೆ ಮತ್ತಿತರರು ಇದ್ದರು.

   

Related Articles

error: Content is protected !!