ಕಟಪಾಡಿ : ಭಾಷೆಗಳ ಅರಿವು ಹೆಚ್ಚುತ್ತಾ ಹೋದ ಹಾಗೆ ವ್ಯಕ್ತಿ ಪ್ರಭುದ್ಧನಾಗುತ್ತಾನೆ.ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆಯ ಒಲವು ಹೆಚ್ಚಿಸುವ ಕಾರ್ಯ ಶಿಕ್ಷಕರು ಕೈಗೊಳ್ಳಬೇಕು ಎಂದು ಸರಕಾರಿ ಪದವಿ ಪೂರ್ವ ಕಾಲೇಜು ಶೃಂಗೇರಿಯ ಸಂಸ್ಕೃತ ಉಪನ್ಯಾಸಕರು ಡಾಕ್ಟರ್ ಮಹೇಶ್ ಕಾಕತ್ಕರ್ ಹೇಳಿದರು.ಇತ್ತೀಚಿಗೆ ಪದವಿಪೂರ್ವ ಸಂಸ್ಕೃತ ಉಪನ್ಯಾಸಕರ ಸಂಘ ಉಡುಪಿ ಜಿಲ್ಲೆ,ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ಸಂಸ್ಕೃತ ಭಾಷಾ ವಿಷಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವೇಕ ಪದವಿ ಪೂರ್ವ ಕಾಲೇಜು ಕೋಟದ ಸಂಸ್ಕೃತ ಉಪನ್ಯಾಸಕರು ಶ್ರೀ ಮಂಜುನಾಥ ಉಪಾಧ್ಯಾಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿ ಎ ಗೋಪಾಲಕೃಷ್ಣ ಭಟ್ ರವರು ಮಾತನಾಡಿ ನಮ್ಮ ಭಾರತದ ಮೂಲ ಸತ್ವವನ್ನು ವಿದ್ಯಾರ್ಥಿಗಳ ಒಳಗೆ ಇಳಿಸುವ ನಿಟ್ಟಿನಲ್ಲಿ ಶಿಕ್ಷಕರು ಖಾತೆ ಕೈಗೊಳ್ಳಬೇಕು ಎಂದರು. ವಿವಿಧ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಅಧ್ಯಾಪಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಪ್ರಶ್ನೆ ಪತ್ರಿಕೆ ತಯಾರಿಕೆ ಪಟ್ಟಿಗಳ ವಿವರಣೆಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಿದರು.