ಕುಂದಾಪುರ : ಡಾ| ಬಿ ಬಿ ಹೆಗ್ಡೆ ಕಾಲೇಜಿನ ರೋಟರಾಕ್ಟ್ ಕ್ಲಬ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಜಂಟಿ ಆಶ್ರಯದಲ್ಲಿ ‘ಡೆಂಗ್ಯೂ ಅರಿವು’ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ| ಪ್ರೇಮಾನಂದ ಅವರು ಮಾತನಾಡಿ, ಡೆಂಗ್ಯೂ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ರೋಗ ಲಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ ಶೆಟ್ಟಿ ವಹಿಸಿದ್ದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ರೊ. ಲಿಯಾಕತ್, ಕಾರ್ಯದರ್ಶಿ ರೊ. ಸಚ್ಚಿದಾನಂದ, ರೋಟರಾಕ್ಟ್ ಕ್ಲಬ್ ಕುಂದಾಪುರದ ಸಭಾಪತಿ ಶ್ರೀ ವೆಂಕಟೇಶ್ ಪ್ರಭು, ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಅವಿತಾ ಕೊರೆಯಾ, ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಅಧ್ಯಕ್ಷ ದ್ವಿತೀಯ ಬಿಸಿಎ ಆದಿತ್ಯ ಹಾಗೂ ಕಾರ್ಯದರ್ಶಿ ದ್ವಿತೀಯ ಬಿಸಿಎ ಮಾನ್ಯ ಉಪಸ್ಥಿತರಿದ್ದರು.ಕಾಲೇಜಿನ ರೋಟರಾಕ್ಟ್ ಕ್ಲಬ್‌ನ ಸಂಯೋಜಕ ಶ್ರೀ ಸತೀಶ್ ಶೆಟ್ಟಿ ಹೆಸ್ಕೂತ್ತೂರು ಸ್ವಾಗತಿಸಿ,ವಿದ್ಯಾರ್ಥಿನಿ ಸ್ನೇಹಾ ಪ್ರಾರ್ಥಿಸಿ,ಪ್ರಥಮ್ ಭಂಡಾರಿ ದ್ವಿತೀಯ ಬಿಬಿಎ ವಂದಿಸಿ,ಶ್ರದ್ಧಾ ತೃತೀಯ ಬಿಬಿಎ ನಿರೂಪಿಸಿದರು.