Home » ಸ್ವಚ್ಚ ತಾ ಹೀ ಸೇವಾ ಕಾರ್ಯಕ್ರಮ
 

ಸ್ವಚ್ಚ ತಾ ಹೀ ಸೇವಾ ಕಾರ್ಯಕ್ರಮ

ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭಾಗಿ

by Kundapur Xpress
Spread the love

ಸಾಸ್ತಾನ : ಕೋಡಿ ಕನ್ಯಾಣ ಡೆಲ್ಟಾ ಬೀಚ್ ಪ್ರವಾಸೋಧ್ಯಮ ದೃಷ್ಟಿಯಿಂದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಶುಕ್ರವಾರ ಕೋಡಿ ಗ್ರಾ.ಪಂ ವ್ಯಾಪ್ತಿಯ ಕೋಡಿ ಕನ್ಯಾಣದ ಡೆಲ್ಟಾ ಬೀಚ್‍ನಲ್ಲಿ ಪ್ರವಾಸೋಧ್ಯಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪಂಚಾಯತ್,ಜಿಲ್ಲಾ ಪ್ರವಾಸೋದ್ಯಮ ಇಲಾಖೆ,ಕೋಡಿ ಗ್ರಾಮಪಂಚಾಯತ್ ನೇತೃತ್ವದಲ್ಲಿ ಕೋಟದ ಪಂಚವರ್ಣ ಸಂಸ್ಥೆ, ಮಾಹೆ ಮಣಿಪಾಲ, ಪೂರ್ಣ ಪ್ರಜ್ಞಾ ಇವ್ನಿಂಗ್ ಕಾಲೇಜು ಉಡುಪಿ,ಜಿಲ್ಲಾ ಅಬಕಾರಿ ಇಲಾಖೆ,ಸಹಯೋಗದೊಂದಿಗೆ ನಡೆದ ಸ್ವಚ್ಚ ತಾ ಹೀ ಸೇವಾ ಕಾಯಕ್ರಮದಲ್ಲಿ ಮಾತನಾಡಿ ಮಾತನಾಡಿ, ಡೆಲ್ಟಾ ಬೀಚ್ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಸ್ಥಳವಾಗಿದೆ.ಇದಕ್ಕೆ ಇಲಾಖೆಯಲ್ಲಿ ಸರ್ವೆ ನಂಬರ್ ಕೂಡ ಇರಲಿಲ್ಲ.ಈಗ ಇಲಾಖೆಗೆ ಸರ್ವೆ ನಂಬರ್ ನೀಡಿ ಪ್ರವಾಸೋಧ್ಯಮ ಇಲಾಖೆಗೆ ನೀಡಲಾಗಿದೆ.ಬ್ಲೂ ಫ್ಲಾಗ್ ಬೀಚ್ ಮಾಡಬೇಕೆಂಬ ಪ್ರಸ್ತಾವನೆ ಇದೆ.ಅಥವಾ ಬೇರೆ ರೀತಿಯಲ್ಲಿ ಪ್ರವಾಸೋಧ್ಯಮಕ್ಕೆ ಪೂರಕವಾಗಿ ಬೀಚ್ ಅಭಿವೃದ್ಧಿ ಪಡಿಸುವ ಉದ್ದೇಶವಿದೆ.ಫ್ಲೋಟಿಂಗ್ ರೆಸ್ಟೋರೆಂಟ್ ಅಥವಾ ಸ್ಥಳಿಯವಾಗಿ ಅಭಿವೃದ್ಧಿಗೆ ಪೂರಕವಾಗಿ ಅಭಿವೃದ್ಧಿ ನಡೆಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಈ ವೇಳೆ ಸ್ವಚ್ಛತಾ ಹೀ ಸೇವಾ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿಗಳು ಸ್ವಚ್ಛಾಗೃಹಿಗಳಿಗೆ ಭೋದಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್ ಬಾಯಲ್,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್,ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥ ಹರೀಶ್,ಪ್ರವಾಸೋದ್ಯಮ ಇಲಾಖೆಯ ಕುಮಾರ್,ಭವಿಷ್ಯ,ಅಬಕಾರಿ ಇಲಾಖೆಯ ಉಪ ಆಯುಕ್ತೆ ಬಿಂದುಶ್ರೀ, ತಾಲೂಕು ಪಂಚಾಯತ್ ಇಓ ಎಚ್.ವಿ ಇಬ್ರಾಹಿಂಪುರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು,ಸ್ಥಳೀಯ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ, ಪೂರ್ಣ ಪ್ರಜ್ಞಾ ಇವ್ನಿಂಗ್ ಕಾಲೇಜು ಉಡುಪಿ ಇದರ ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ.ಜೆ, ಮಾಹೆ ಮಣಿಪಾಲ ಸಹಾಯಕ ಪ್ರಾಧ್ಯಾಪಕ ಡಾ.ಪ್ರವಿಣ್ ಕುಮಾರ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ,ಕೋಡಿ ಗ್ರಾಮಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

   

Related Articles

error: Content is protected !!