ಬೆಂಗಳೂರು : ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರ ಮನೆ ಹಾಗೂ ಕಚೇರಿಗಳು ಸೇರಿದಂತೆ 11 ಕಡೆ ವಿಶೇಷ ತನಿಖಾ ತಂಡ (ಎಸ್ಐಟಿ) ಶನಿವಾರ ದಿಢೀರ್ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದೆ.
ಈ ವೇಳೆ ಶಾಸಕರ ಮನೆಯಲ್ಲಿ ಪೆನ್ ಡ್ರೈವ್, 2 ಲ್ಯಾಪ್ ಟಾಪ್, ಸಿಸಿಟಿವಿ ಡಿವಿಆರ್ಗಳು ಮತ್ತು ಶಾಸಕರ ಆಪ್ತರ ಮನೆಗಳಲ್ಲಿ ಪೆನ್ಡ್ರೈವ್ ಸೇರಿ ಕೆಲ ದಾಖಲೆಗಳು ಜಪ್ತಿಯಾಗಿವೆ ಎನ್ನಲಾಗಿದೆ. ಜಪ್ತಿಯಾದ ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್ಗಳಲ್ಲಿರುವ ಮಾಹಿತಿ ಬಗ್ಗೆ ಕುತೂಹಲ ಮೂಡಿದ್ದು, ಅವುಗಳನ್ನು ಸೈಬರ್ತಜ್ಞರ ತಪಾ ಸಣೆಗೆ ಎಸ್ಐಟಿ ಅಧಿಕಾರಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ.