ಬೆಂಗಳೂರು : ಲೋಕಾಯುಕ್ತದ ಜತೆ ಜಾರಿ ನಿರ್ದೇಶನಾಲಯ (ಇಡಿ) ಕೂಡ ಮುಡಾ ಹಗರಣದ ತನಿಖೆ ನಡೆಸಲು ಮುಂದಾಗಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ತಲೆ ನೋವಾಗಿ ಪರಿಣಮಿಸಿದೆ.
ಪತ್ನಿ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದುಕೊಂಡ ಮುಡಾ ಹಗರಣದ ಎ l ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಅಧಿಕಾರಿಗಳು ಮಿನಾಮೇಷ ಎಣಿಸುತ್ತಿರುವಾಗಲೇ ಜಾರಿ ನಿರ್ದೇಶನಾಲಯ ಮಧ್ಯ ಪ್ರವೇಶಿಸಲು ಮುಂದಾಗಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಬೆಂಗಳೂರು ಶಾಂತಿನಗರದ ಇಡಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದು, ಅದರನ್ವಯ ಇಸಿಐಆರ್ (ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಸರ್ಮೇಷನ್ ರಿಪೋರ್ಟ್) ಮೂಲಕ ಕ್ರಮಕೈಗೊಳ್ಳಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ಮುಡಾ ಕೇಸ್ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸೋಮವಾರ ತಮ್ಮವರ ಮೂಲಕ ಇಡಿ ಕಚೇರಿಗೆ ದೂರು ತಲುಪಿಸಿದ್ದುಇದೀಗ ಇಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡು ಸ್ವೀಕೃತಿ ಪತ್ರ ಸಹ ನೀಡಿದ್ದಾರೆ. ಇದರ ಬೆನ್ನಲ್ಲೇ ಕ್ರಮ ಕೈಗೊಳ್ಳಲು ಇಡಿ ಸಿದ್ಧತೆ ನಡೆಸಿದೆ. ಮೊದಲಿಗೆ ಆರೋಪಿ ಗಳಾದ ಸಿದ್ದರಾಮಯ್ಯ ಸೇರಿ ಇತರರಿಗೆ ನೊಟೀಸ್ ಜಾರಿಗೊಳಿಸಿ ಬಳಿಕ ದಾಳಿ ನಡೆಸುವ ಸಾಧ್ಯತೆಯಿದೆ.