Home » ರೈತ ಧ್ವನಿ ಸಂಘ ಮುಂದಿನ ಹೋರಾಟದ ಬಗ್ಗೆ ಚರ್ಚೆ
 

ರೈತ ಧ್ವನಿ ಸಂಘ ಮುಂದಿನ ಹೋರಾಟದ ಬಗ್ಗೆ ಚರ್ಚೆ

by Kundapur Xpress
Spread the love

ಕೋಟ : ಕೋಟ ಸಿ.ಎ ಬ್ಯಾಂಕ್‍ನ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಕೋಟದ ರೈತಧ್ವನಿ ಸಂಘಟನೆಯ ವಿಶೇಷ ಸಭೆ ಜರುಗಿತು.ಈ ವೇಳೆ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಸಂಘಟನೆಯು ಇತ್ತೀಚಿಗೆ ನಡೆಸಿದ ರೈತ ಉಪವಾಸ ನಿರಶನದ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಿದರು.ಸಭೆಯಲ್ಲಿ ಮೊದಲ ನವರಾತ್ರಿಯ ದಿನ ಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವುದು ಸೇರಿಂದಂತೆ ಅತೀವೃಷ್ಟಿಯಿಂದ ಬೆಳೆಹಾನಿ ಉಂಟಾಗಿದ್ದು,ಈ ಬಗ್ಗೆ ಸರಕಾರದ ಪರಿಹಾರ ಹಣ ಇದುವರೆಗೆ ಬಿಡುಗಡೆ ಆಗದಿರುವ ಬಗ್ಗೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುವ ಕುರಿತು ಪ್ರಸ್ತಾಪಿಸಲಾಯಿತು.

ಪ್ರಸ್ತುತ ರೈತರು ಬೆಳೆದ ಭತ್ತಕ್ಕೆ ಪ್ರತೀ ಕೆ.ಜಿ.ಗೆ ಕೇವಲ ರೂ 22 ರೂ ದರವನ್ನು ರೈಸ್‍ಮಿಲ್ ಮಾಲಕರು ನಿಗದಿ ಮಾಡಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತೀರಾ ಕನಿಷ್ಠ ಬೆಲೆ ಆಗಿದೆ.ಇದು ರೈತರನ್ನು ಶೋಷಣೆಗಿಡು ಮಾಡಿದೆ ಆದ್ದರಿಂದ ಈ ಬಗ್ಗೆ ಶೀಘ್ರದಲ್ಲಿ ರೈತರ ನಿಯೋಗದೊಂದಿಗೆ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಲು ನಿರ್ಣಯ ಕೈಗೊಂಡಿತ್ತಲ್ಲದೆ ಮಿಲ್ ಮಾಲಕರು ಮತ್ತು ಕೃಷಿ ಅಧಿಕಾರಿಗಳ ಸಭೆಯನ್ನು ಕರೆದು ರೈತರ ಭತ್ತಕ್ಕೆ ನ್ಯಾಯಯುತ ದರ ನಿಗದಿ ಮಾಡಲು ಒತ್ತಾಯಿಸುವುದು.

ಈ ಬಗ್ಗೆ ಮುಂದೆ ಹೋರಾಟ ,ಸೂಲಡ್ಪು-ಮಡಿವಾಳಸಾಲು ಹೊಳೆ ಹೂಳೆತ್ತುವ ಕಾಮಗಾರಿಗೆ ವಿಸ್ತೃತ ಯೋಜನಾವರದಿ ಸಿದ್ಧಗೊಂಡಿದ್ದು, ಆಕ್ಟೊಬರ್ ತಿಂಗಳ 15ರ ಹಾಗೆ ರೈತರ ನಿಯೋಗ ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮೂಲಕ ಭೇಟಿ ಮಾಡಲು ಸೇರಿದಂತೆ ಮಣೂರು ಗ್ರಾಮದ ಕಾಂಡ್ಲವನ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ರೈತ ಧ್ವನಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

   

Related Articles

error: Content is protected !!