Home » ಸೈಟು ಮರಳಿಸಿದ್ದು ತಪ್ಪು ಒಪ್ಪಿಕೊಂಡಂತಲ್ಲ
 

ಸೈಟು ಮರಳಿಸಿದ್ದು ತಪ್ಪು ಒಪ್ಪಿಕೊಂಡಂತಲ್ಲ

ಸಿದ್ದರಾಮಯ್ಯ

by Kundapur Xpress
Spread the love

 ಬೆಂಗಳೂರು : ಮುಡಾ ನೀಡಿದ್ದ ನಿವೇಶನ ವಾಪಸ್‌ ಕೊಟ್ಟರೆ ತಪ್ಪು ಒಪ್ಪಿಕೊಂಡಂತೆ ಹೇಗಾಗುತ್ತದೆ ? ಈ ಪ್ರಕರಣದಲ್ಲಿ ನನ್ನ ಪಾತ್ರವಾದರೂ ಏನಿದೆ ? ನಾನು ತಪ್ಪು ಮಾಡಿಲ್ಲ ಎಂದ ಮೇಲೆ ರಾಜೀನಾಮೆ ನೀಡುವ ಅಗತ್ಯವಿಲ್ಲ  ರಾಜೀನಾಮೆ ನೀಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರ ದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಮುಡಾ ನಿವೇಶನಗಳನ್ನು ವಾಪಸ್ ನೀಡಿರುವುದರಿಂದ ತಪ್ಪು ಒಪ್ಪಿಕೊಂಡಂತೆ ಆಗಿಲ್ಲ. ಮುಡಾ ನಿವೇಶನ ಪ್ರಕರಣದಲ್ಲಿ ನನ್ನ ಪಾತ್ರವೇನು? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ನಾನು ರಾಜೀನಾಮೆ ನೀಡುವುದರಿಂದ ಎಲ್ಲವೂ ಮುಗಿಯು ತ್ತದೆಯೇ ? ಅನಗತ್ಯವಾಗಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ತಪ್ಪು ಮಾಡಿಲ್ಲ ಎಂದ ಮೇಲೆ ರಾಜೀನಾಮೆ ಏಕೆ ನೀಡಬೇಕು ಎಂದು ಹೇಳಿದರು.

   

Related Articles

error: Content is protected !!