ಕುಂದಾಪುರ : ಚಿಕ್ಕನ್‌ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.3ರಿಂದ 12 ರವರೆಗೆ ಜರುಗಲಿದೆ.ಅ.3ರಂದು ಬೆಳಗ್ಗೆ ಕಲಶ ಸ್ಥಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಅಮ್ಮನವರಿಗೆ ವಿಶೇಷ ಅಲಂಕಾರ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.
ಅ.10 ರಂದು ಬೆಳಗ್ಗೆ 9.00 ಕ್ಕೆ ಪುಣ್ಯಾಹ,ಗಣಪತಿ ಪೂಜೆ, ಸಾಮೂಹಿಕ ಚಂಡಿಕಾಯಾಗ,ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ,ಮಹಾ ಪೂಜೆ,ತೀರ್ಥಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಅ.11 ರಂದು ರಾತ್ರಿ 8.00 ಗಂಟೆಗೆ ಮಹಾ ರಂಗಪೂಜೆ ಹಾಗೂ ಅ.12 ರಂದು ಬೆಳಗ್ಗೆ ಕಲಶ ವಿಸರ್ಜನೆ ನಡೆಯಲಿದೆ.
ನವರಾತ್ರಿ ಸಂದರ್ಭ ಪ್ರತಿದಿನ ತಾಯಿಗೆ ಹರಕೆ ಬಂದ ಸೀರೆಗಳ ಏಲಂ ನಡೆಯಲಿದೆ.ಈ ಧಾರ್ಮಿಕ ಕಾರ್ಯಕ್ರಮಗಳು ಮರಕಡ ಶ್ರೀ ಗುರುಪರಾಶಕ್ತಿ ಮಠದ ಶ್ರೀನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿ ಅನುಗ್ರಹದೊಂದಿಗೆ ವೇ.ಮೂ.ಚಂದ್ರಶೇಖರ್ ಸೋಮಯಾಜಿ ಕೋಟ ನೇತೃತ್ವದಲ್ಲಿ ಜರುಗಲಿದೆ ಎಂದು ದೇವಳದ ಧರ್ಮದರ್ಶಿ ಗಣಪತಿ ಸುವರ್ಣ ತಿಳಿಸಿದ್ದಾರೆ