Home » ಕೋಟ ವಿವೇಕ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ
 

ಕೋಟ ವಿವೇಕ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆ

ಚೇಂಪಿ ರಮಾನಂದ ಭಟ್

by Kundapur Xpress
Spread the love

ಕೋಟ : ಸ್ಥಳೀಯ ಪ್ರತಿಷ್ಠಿತ ಕೋಟದ ವಿವೇಕ ವಿದ್ಯಾಸಂಸ್ಥೆಗಳ ಹಿಂದಿನ ವಿದ್ಯಾರ್ಥಿ ಸಂಘದ ಮಹಾಸಭೆಯು  ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಚೇಂಪಿ ರಮಾನಂದ ಭಟ್ ಪುನರಾಯ್ಕೆಗೊಂಡರು.ಉಪಾಧ್ಯಕ್ಷರಾಗಿ ಸದಾರಮ ಹೇರ್ಳೆ ಹಾಗೂ ನಾಗೇಶ ಶ್ಯಾನುಭಾಗ್, ಕಾರ್ಯದರ್ಶಿಯಾಗಿ ಸುಧಾಕರ, ಜತೆ ಕಾರ್ಯದರ್ಶಿ ಗಳಾಗಿ ಸಂಜೀವ.ಜಿ ಹಾಗೂ ಚಂದ್ರಶೇಖರ ಮೆಂಡನ್, ಮತ್ತು ಖಜಾಂಚಿಯಾಗಿ ಪ್ರಕಾಶ ಹೇರ್ಳೆ ಆಯ್ಕೆಯಾದರು.

ಇದೇ ವೇಳೆ ಮಾತನಾಡಿದ ಅಧ್ಯಕ್ಷರಾಗಿ ಆಯ್ಕೆಯಾದ ರಮಾನಂದ ಭಟ್ ಮಾತನಾಡಿ ವಿವೇಕ ವಿದ್ಯಾಸಂಸ್ಥೆಗಳು ಕಳೆದ ವರ್ಷ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದು, ಪ್ರತೀ ವರ್ಷ ಅತ್ಯುತ್ತಮ ಪರೀಕ್ಷಾ ಫಲಿತಾಂಶ ನೀಡುತ್ತಿದ್ದು, ಸಂಘವು ಇಂದಿನ ವರ್ಷ ತನ್ನ ಸದಸ್ಯತ್ವ ಅಭಿಯಾನವನ್ನು ವಿಶೇಷ ರೀತಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ ಈ ಹಿನ್ನಲ್ಲೆಯಲ್ಲಿವ ಹಿಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಸಂಘಟನೆಯನ್ನು ಬಲಪಡಿಸಬೇಕಾಗಿ ವಿನಂತಿಸಿದರು.

   

Related Articles

error: Content is protected !!