Home » ಕೋಟ ಅಮೃತೇಶ್ವರಿ ದೇಗುಲ ಶರನ್ನವರಾತ್ರಿ ಉತ್ಸವ
 

ಕೋಟ ಅಮೃತೇಶ್ವರಿ ದೇಗುಲ ಶರನ್ನವರಾತ್ರಿ ಉತ್ಸವ

by Kundapur Xpress
Spread the love

ಕೋಟ : ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.ಮೊದಲ ನವರಾತ್ರಿ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪತ್ನಿ ಶಾಂತ ಎಸ್ ಪೂಜಾರಿ ಸಹಿತ ಕುಟುಂಬಿಕರು ಚಂಡಿಕಾ ಸಪ್ತಶತಿ ಪಾರಾಯಣ,ದುರ್ಗಾಹೋಮದಲ್ಲಿ ಸೇವಾಕರ್ತರಾಗಿ ಭಾಗಿಯಾದರು.

ದೇಗುಲದ ಧಾರ್ಮಿಕ ವಿಧಿವಿಧಾನಗಳು ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಜರಗಿತು.ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಸಂಸದರ ಕುಟುಂಬಿಕರಿಗೆ ಪ್ರಸಾದ ವಿತರಿಸಿ ಗೌರವಿಸಿದರು.ದೇಗುಲದಲ್ಲಿ ಪೂರ್ವಾಹ್ನ ಭತ್ತದ ತೆನೆ (ಕದಿರು ಹೊಸ್ತ್) ಕೊಯ್ಯುವ ಕಾರ್ಯಕ್ರಮವನ್ನು ಹಿರಿಯ ಅರ್ಚಕ ಪ್ರತಿನಿಧಿ ಸುಬ್ರಾಯ ಜೋಗಿ ಹಾಗೈ ಪ್ರಸ್ತುತ ಅರ್ಚಕರಾದ ಸಂತೋಷ್ ಕುಮಾರ್ ಸಮ್ಮುಖದಲ್ಲಿ ಜರಗಿದವು.ಪ್ರತಿವರ್ಷ ನವರಾತ್ರಿ ಮೊದಲ ದಿನದಂದು ನೂರಾರು ಕುಟುಂಬಗಳು ದೇಗುಲದಿಂದ ಕದಿರು ಪಡೆದು ಹೊಸ್ತ್ ಹಬ್ಬವನ್ನು ಆಚರಿಸಿಕೊಂಡರು.

ದೇಗುಲದಲ್ಲಿ ವಿಶೇಷ ಅಲಂಕಾರ ದೇವಿಯ ಮೊದಲ ಪುಷ್ಭಾಂಲಕಾರ ಶೈಲ ಪುತ್ರಿಯಾಗಿ ಭಕ್ತರ ಗಮನ ಸೆಳೆದಳು.
ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಮುಖ್ಯಕಾರ್ಯನಿರ್ವಹಣಾಧಿಕಾರಿ,ಮಾಜಿ ಟ್ರಸ್ಟಿ ಸದಸ್ಯರು, ವ್ಯವಸ್ಥಾಪಕರು,ಸಿಬ್ಬಂದಿವರ್ಗ ಉಪಸ್ಥಿತರಿದ್ದರು.ಅಪರಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಸನ್ನಪ್ರಸಾದ ಸ್ವೀಕರಿಸಿದರು.ಸಂಜೆ ವಿವಿಧ ಸಾಂಸ್ಕ್ರತಿಕ  ಕಾರ್ಯಕ್ರಮಗಳು ಜರಗಿದವು.

   

Related Articles

error: Content is protected !!