Home » ಶಾಸಕ ವಿನಯ್‌ ಕುಲಕರ್ಣಿ ವಿರುದ್ದ ರೇಪ್‌ ಕೇಸ್
 

ಶಾಸಕ ವಿನಯ್‌ ಕುಲಕರ್ಣಿ ವಿರುದ್ದ ರೇಪ್‌ ಕೇಸ್

by Kundapur Xpress
Spread the love

ಬೆಂಗಳೂರು : ತನಗೆ ಜೀವ ಬೆದರಿಕೆ ಹಾಕಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂಜಯನಗರ ಠಾಣೆಗೆ ಮಂಗಳವಾರ ಹಾವೇರಿ ಜಿಲ್ಲೆ ಸಮಾಜ ಸೇವಕಿಯೊಬ್ಬರು ದೂರು ನೀಡಿದರೆ, ಇದಕ್ಕೆ ಪ್ರತಿಯಾಗಿ ತನಗೆ 2 ಕೋಟಿ ರು.ಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಆ ಮಹಿಳೆ ಹಾಗೂ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥರ ವಿರುದ್ಧ ವಿನಯ್ ಕುಲಕರ್ಣಿ ದೂರು ದಾಖಲಿಸಿದ್ದಾರೆ.

ಈ ಎರಡು ದೂರುಗಳನ್ನು ಸ್ವೀಕರಿಸಿರುವ ಪೊಲೀಸರು, ವಿನಯ್ ಕುಣಕರ್ಣಿ ಹಾಗೂ ಅವರ ಆಪ್ತ ಅರ್ಜುನ್ ವಿರುದ್ಧ ಅತ್ಯಾಚಾರ .ಮತ್ತು ಜೀವ ಬೆದರಿಕೆ ಆರೋಪಗಳಡಿ ಎಫ್ ಐಆರ್ ದಾಖಲಿಸಿದ್ದಾರೆ. ಹಾಗೆ ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಮತ್ತು ಹಾವೇರಿ ಜಿಲ್ಲೆಯ ಮಹಿಳೆ ವಿರುದ್ಧ ಬ್ಲ್ಯಾಕ್ ಮೇಲ್ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ

   

Related Articles

error: Content is protected !!