ಉಡುಪಿ: ಇತ್ತೀಚಿಗೆ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಶೋಭಾ ಬೇಕಲ್ ರವರು ಬಿಜೆಪಿಯ ಸದಸ್ಯರೇ ಅಲ್ಲ ಎಂದು ಉಡುಪಿ ಜಿಲ್ಲಾ ಮಹಿಳಾ ಮೊರ್ಚಾದ ಅಧ್ಯಕ್ಷೆಯಾದ ಶ್ರೀಮತಿ ವೀಣಾ ಶೆಟ್ಟಿಯವರು ಸ್ಪಷ್ಟನೆ ನೀಡಿದ್ದಾರೆ
ಮಾಧ್ಯಮಗಳಲ್ಲಿ ಶೋಭಾ ಬೇಕಲ್ ರವರು ಬಿಜೆಪಿ ಸದಸ್ಯರಾಗಿದ್ದು ಕಾಂಗ್ರೇಸ್ ಪಕ್ಷ ಸೇರಿದ್ದಾರೆ ಎಂದು ವರದಿಯಾಗಿತ್ತುಅವರು ಬಿಜೆಪಿಯ ಪ್ರಾರ್ಥಮಿಕ ಸದಸ್ಯತ್ವವನ್ನೂ ಹೊಂದಿಲ್ಲ ಅವರು ಬಿಜೆಪಿಯ ಕಚೇರಿಗೂ ಭೇಟಿ ಕೊಟ್ಟಿಲ್ಲ ಅವರಿಗೂ ಬಿಜೆಪಿಗೂ ಯಾವುದೇ ರೀತಿಯ ಸಂಭಂಧವಿಲ್ಲ ಕೇವಲ ಪ್ರಚಾರದ ಉದ್ದೇಶದಿಂದ ಕಾಂಗ್ರೇಸ್ ಪಕ್ಷದವರು ಆಕೆಯನ್ನು ಬಿಜೆಪಿ ಸದಸ್ಯರು ಎಂದು ಬಿಂಬಿಸುವ ಮೂಲಕ ಸುಳ್ಳಿನ ರಾಜಕೀಯ ನೆಡೆಸುತ್ತಿದ್ದಾರೆ ಇಂತಹ ಸುಳ್ಳಿನ ರಾಜಕೀಯಕ್ಕೆ ಕ್ಷೇತ್ರದ ಮತದಾರರು ಮನ್ನಣೆ ನೀಡುವುದಿಲ್ಲವೆಂದು ಶ್ರೀಮತಿ ವೀಣಾ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ