ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ವಿಜಯದಶಮಿ ದಿನ ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಐತಿಹಾಸಿಕ ಜಂಬೂಸವಾರಿ ನಡೆಯಲಿದೆ. ಇದಕ್ಕಾಗಿ ದಿನಗಣನೆ ಆರಂಭವಾಗಿದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಬುಧವಾರ ಅರಮನೆ ಆವರಣದಲ್ಲಿ ಪೂರ್ವಾಭ್ಯಾಸ ನಡೆಸಿತು. ಅರಮನೆಯ ಮುಂಭಾಗ ಹಾಕಿದ್ದ ಪುಷ್ಪಾರ್ಚನೆ ಮಾಡುವ ವೇದಿಕೆಯ ಬಳಿಗೆ ಗಜಪಡೆಯ ಕ್ಯಾಪ್ಟನ್ ತನ್ನ ಎಡ, ಬಲದಲ್ಲಿ ಕುಮ್ಮಿ ಆನೆಗಳೊಂದಿಗೆ ಬಂದು ನಿಂತು ವೇದಿಕೆ ಮೇಲಿರುವ ಗಣ್ಯರಿಗೆ ಸೊಂಡಿಲನ್ನೆತ್ತಿ ಸೆಲ್ಯೂಟ್ ಮಾಡಿತು
ಈ ವೇಳೆ ವೇದಿಕೆ ಮೇಲಿದ್ದ ಶಾಸಕ ಟಿ.ಎಸ್.ಶ್ರೀವತ್ಸ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಡಿಸಿಎಫ್ ಡಾ.ಪ್ರಭುಗೌಡ, ಸಿಎಆರ್ ಡಿಸಿಪಿ ಎಚ್.ಪಿ.ಸತೀಶ್ರಿಂದ ಪುಷ್ಪಾರ್ಚನೆ ಪೂರ್ವಾಭ್ಯಾಸ ನೆರವೇರಿತು. ಪೊಲೀಸ್ ಪೇದೆಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪೂರ್ವಾಭ್ಯಾಸದಲ್ಲಿ ಅಶ್ವರೋಹಿ ದಳ, ದಸರಾ ಗಜಪಡೆ ಭಾಗಿಯಾದವು. ನಿಶಾನೆ ಆನೆಯಾಗಿ ಧನಂಜಯ ಮುಂಚೂಣಿಯಲ್ಲಿ ಸಾಗಿದ. ಧನಂಜಯನನ್ನು ಹಿಂಬಾಲಿಸುತ್ತಾ ನೌಫತ್ ಆನೆಯಾಗಿ ಗೋಪಿ ಸಾಗಿತು. ಅದರ ಹಿಂದೆ ಸಾಲಾಗಿ ಉಳಿದ ಆನೆಗಳು ಸಾಗಿದವು. ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿಗೆ ವೇದಿಕೆ ಮೇಲಿದ್ದ ಅಧಿಕಾರಿಗಳು ಪುಷ್ಪಾರ್ಚನೆ ನೆರವೇರಿಸಿದರು. ಅರ್ಜುನನ ಎಡಬಲದಲ್ಲಿ ಲಕ್ಷ್ಮಿ ಹಾಗು ಹಿರಣ್ಯ ಕುಮ್ಮಿ ಆನೆಗಳಾಗಿ ಭಾಗಿಯಾದವು ರಿಹರ್ಸಲ್ನಲ್ಲಿ ಅಶ್ವಪಡೆ ಕೂಡ ಭಾಗಿಯಾಯಿತು